20ರಿಂದ ನಮ್ಮೂರ ಹಬ್ಬ

7

20ರಿಂದ ನಮ್ಮೂರ ಹಬ್ಬ

Published:
Updated:

ಬೆಂಗಳೂರು: ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ‘ನಮ್ಮೂರ ಹಬ್ಬ’ ಉತ್ಸವ ಜಯನಗರದ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಇದೇ 20 ಹಾಗೂ 21ರಂದು ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎನ್‌. ಅಡಿಗ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಟ ಉಪೇಂದ್ರ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ. ಎಂ ಹೆಗ್ಡೆ ಅವರಿಗೆ ’ಕಿರೀಟ ಪ್ರಶಸ್ತಿ’ ನೀಡಲಾಗುವುದು ಎಂದರು.

ಬಯಲಿನ ‘ಚಪ್ಪರ’ ವೇದಿಕೆಯಲ್ಲಿ ಕರಾವಳಿಯ ಸಂಸ್ಕೃತಿಗಳ ಪ್ರದರ್ಶನ, ‘ಫೋಟೋ ಸಂತೆ’ಯಲ್ಲಿ ಖ್ಯಾತ ಛಾಯಾಗ್ರಾಹಕರಿಂದ ಸೆರೆಹಿಡಿಯಲ್ಪಟ್ಟ ಕರಾವಳಿ ಕಲೆಗಳು ಹಾಗೂ ಜನಜೀವನ ಕುರಿತ ಛಾಯಾಚಿತ್ರಗಳ ಪ್ರದರ್ಶನ, ಅಪರೂಪದ ಗ್ರಾಮೀಣ ಕ್ರೀಡೆಗಳಿಗಾಗಿ ‘ಆಟದ ಬಯಲು’, ಬಾಣಸಿಗರು ಸ್ಥಳದಲ್ಲೇ ತಯಾರಿಸಿದ ಕರಾವಳಿ ಖಾದ್ಯಗಳಿಗಾಗಿ ‘ನಮ್ಮೂರ ತಿಂಡಿ’, ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ನೇತೃತ್ವದಲ್ಲಿ ‘ಕಾರ್ಟೂನು ಹಬ್ಬ’ ನಡೆಯಲಿದೆ ಎಂದು ತಿಳಿಸಿದರು.

ಸಚಿವ ಯು. ಟಿ. ಖಾದರ್‌ ಉತ್ಸವದ ಭಿತ್ತಿಪತ್ರ ಬಿಡುಗಡೆಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry