ತೊಗಾಡಿಯಾ ಕಣ್ಮರೆ: ವಿಎಚ್‌ಪಿ ಪ್ರತಿಭಟನೆ

7

ತೊಗಾಡಿಯಾ ಕಣ್ಮರೆ: ವಿಎಚ್‌ಪಿ ಪ್ರತಿಭಟನೆ

Published:
Updated:
ತೊಗಾಡಿಯಾ ಕಣ್ಮರೆ: ವಿಎಚ್‌ಪಿ ಪ್ರತಿಭಟನೆ

ಅಹಮದಾಬಾದ್‌: ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಅವರು ಸೋಮವಾರ ಬೆಳಿಗ್ಗೆಯಿಂದ ಕಣ್ಮರೆಯಾಗಿದ್ದಾರೆ ಎಂದು ಹೇಳಿಕೊಂಡ ವಿಎಚ್‌ಪಿ ಪತ್ತೆ ಹಚ್ಚಬೇಕೆಂದು ಪ್ರತಿಭಟನೆ ನಡೆಸಿತು.

ಪ್ರಕರಣವೊಂದರಲ್ಲಿ ಅವರನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ ಎಂದು ವಿಎಚ್‌ಪಿ ಆರೋಪಿಸಿದೆ. ಆದರೆ, ಈ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ.

ಹಳೆಯ ಪ್ರಕರಣವೊಂದರಲ್ಲಿ ತೊಗಾಡಿಯಾ ವಿರುದ್ಧ ಇರುವ ಬಂಧನ ವಾರಂಟ್‌ ಜಾರಿ ಮಾಡಲು ರಾಜಸ್ಥಾನದ ಪೊಲೀಸರು ನಮ್ಮನ್ನು ಭೇಟಿಯಾಗಿದ್ದರು. ಆದರೆ, ಈ ವೇಳೆ ತೊಗಾಡಿಯಾ ಅವರು ಮನೆಯಲ್ಲಿರಲಿಲ್ಲ’ ಎಂದು ಸೋಲಾ ಸ್ಥಳೀಯ ಪೊಲೀಸ್‌ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.

‘ಬೆಳಿಗ್ಗೆ 10 ಗಂಟೆಯಿಂದ ತೊಗಾಡಿಯಾ ಅವರು ಕಾಣೆಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಪೊಲೀಸರ ಕರ್ತವ್ಯ’ ಎಂದು ಗುಜರಾತ್‌ ವಿಎಚ್‌ಪಿ ಘಟಕದ ಪ್ರಧಾನ ಕಾರ್ಯದರ್ಶಿ ರಾಂಚೋಡ್‌ ಭಾರ್ವದ್‌ ಆಗ್ರಹಿಸಿದ್ದಾರೆ.

ಆದರೆ, ಅವರ ಬಂಧನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದೂ ಅವರು ತಿಳಿಸಿದ್ದಾರೆ. 

‘ಅಹಮದಾಬಾದ್‌ನಲ್ಲಿ ಅವರು ಸಿಗದ ಕಾರಣ ನಮ್ಮ ತಂಡ ಅವರನ್ನು ಬಂಧಿಸಿಲ್ಲ. ಅವರು ನಮ್ಮ ಕಸ್ಟಡಿಯಲ್ಲಿದ್ದಾರೆ ಎಂಬುದು ಸುಳ್ಳು ಸುದ್ದಿ’ ಎಂದು ಭರತ್‌ಪುರ್‌ದ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry