ಬಡ್ಡಿ ಸಬ್ಸಿಡಿ: ಅಲಹಾಬಾದ್‌ ಬ್ಯಾಂಕ್‌ ಜತೆ ಕೇಂದ್ರ ಒಪ್ಪಂದ

7

ಬಡ್ಡಿ ಸಬ್ಸಿಡಿ: ಅಲಹಾಬಾದ್‌ ಬ್ಯಾಂಕ್‌ ಜತೆ ಕೇಂದ್ರ ಒಪ್ಪಂದ

Published:
Updated:
ಬಡ್ಡಿ ಸಬ್ಸಿಡಿ: ಅಲಹಾಬಾದ್‌ ಬ್ಯಾಂಕ್‌ ಜತೆ ಕೇಂದ್ರ ಒಪ್ಪಂದ

ನವದೆಹಲಿ: ದೀನ್‌ದಯಾಳ್‌ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯ (ಡಿಎವೈ ಮತ್ತು ಎನ್‌ಯುಎಲ್‌ಎಂ) ಸ್ವ ಉದ್ಯೋಗ ಫಲಾನುಭವಿಗಳಿಗೆ ಬಡ್ಡಿ ಸಬ್ಸಿಡಿಯನ್ನು ತ್ವರಿತವಾಗಿ ಒದಗಿಸಲು ಕೇಂದ್ರ ಸರ್ಕಾರವು ಅಲಹಾಬಾದ್‌ ಬ್ಯಾಂಕ್‌ ಜತೆ ಒಪ್ಪಂದ ಮಾಡಿಕೊಂಡಿದೆ.

ಗೃಹನಿರ್ಮಾಣ ಮತ್ತು ನಗರ ಬಡತನ ನಿವಾರಣಾ ಸಚಿವಾಲಯವು ಅಲಹಾಬಾದ್‌ ಬ್ಯಾಂಕ್‌ ಜತೆ ಈ ಒಪ್ಪಂದ ಮಾಡಿಕೊಂಡಿದೆ. ಅರ್ಹ ಫಲಾನುಭವಿಗಳ ಬಡ್ಡಿ ಸಬ್ಸಿಡಿ ಸೌಲಭ್ಯವನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಜಾರಿಗೆ ತರಲು ಈ ಒಪ್ಪಂದ ನೆರವಾಗಲಿದೆ.

‘ಎನ್‌ಯುಎಲ್‌ಎಂ’ ಯೋಜನೆಯ ಬಡ್ಡಿ ಸಬ್ಸಿಡಿ ಸೌಲಭ್ಯ ಒದಗಿಸುವ ಉದ್ದೇಶಕ್ಕೆಂದೆ ಪ್ರತ್ಯೇಕ ಅಂತರ್ಜಾಲ ತಾಣ ರೂಪಿಸಲಾಗಿದೆ. ಸಬ್ಸಿಡಿಯನ್ನು ನಗದು ನೇರ ವರ್ಗಾವಣೆ ಸೌಲಭ್ಯದಡಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುವುದು. ಬ್ಯಾಂಕ್‌ಗಳು ಮತ್ತು ನಗರಗಳಲ್ಲಿನ ಸ್ಥಳೀಯ ಸಂಸ್ಥೆಗಳು ಮಂಜೂರು ಮಾಡಿದ ಸಾಲಗಳನ್ನು ದೃಢೀಕರಿಸುವುದಕ್ಕೂ ಈ ಅಂತರ್ಜಾಲ ತಾಣ ನೆರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry