ಕ್ಯಾಪಿಟಲ್‌ ಫರ್ಸ್ಟ್‌ ಸ್ವಾಧೀನಕ್ಕೆ ಒಪ್ಪಿಗೆ

7

ಕ್ಯಾಪಿಟಲ್‌ ಫರ್ಸ್ಟ್‌ ಸ್ವಾಧೀನಕ್ಕೆ ಒಪ್ಪಿಗೆ

Published:
Updated:

ಮುಂಬೈ: ಬ್ಯಾಂಕಿಂಗೇತರ ಹಣಕಾಸು ಕಂಪನಿ ಕ್ಯಾಪಿಟಲ್‌ ಫರ್ಸ್ಟ್‌, ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನವಾಗಲಿದೆ.

ಎರಡೂ ಕಂಪನಿಗಳ ಆಡಳಿತ ಮಂಡಳಿಗಳು ಕ್ಯಾಪಿಟಲ್‌ ಫರ್ಸ್ಟ್‌ನ ಪ್ರತಿ 10 ಷೇರುಗಳಿಗೆ ಐಡಿಎಫ್‌ಸಿ ಬ್ಯಾಂಕ್‌ 139 ಷೇರುಗಳನ್ನು ನೀಡಲು ಒಪ್ಪಿಗೆ ನೀಡಿವೆ.

ಎರಡರಿಂದ ಮೂರು ತ್ರೈಮಾಸಿಕದೊಳಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿವೆ.

‘ಸದ್ಯ ಮೂಲಸೌಕರ್ಯ ವಲಯಕ್ಕೆ ಮಾತ್ರವೇ ಆರ್ಥಿಕ ನೆರವು ನೀಡಲಾಗುತ್ತಿದೆ. ಕ್ಯಾಪಿಟಲ್‌ ಫರ್ಸ್ಟ್‌ ವಿಲೀನವಾದ ಬಳಿಕ ಐಡಿಎಫ್‌ಸಿ ಬ್ಯಾಂಕ್‌ ಪೂರ್ಣ ಪ್ರಮಾಣದ ಬ್ಯಾಂಕ್‌ ಆಗಲಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಲಾಲ್ ತಿಳಿಸಿದ್ದಾರೆ.

ಕ್ಯಾಪಿಟಲ್‌ ಫರ್ಸ್ಟ್‌ನ ಸಿಎಂಡಿ ವಿ. ವೈದ್ಯನಾಥನ್‌ ಅವರು  ವಿಲೀನದ ಬಳಿಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕವಾಗಲಿದ್ದಾರೆ. ಐಡಿಎಫ್‌ಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿರುವ ರಾಜೀವ್‌ ಲಾಲ್‌ ಅವರು  ಕಾರ್ಯ

ನಿರ್ವಾಹಕೇತರ ಅಧ್ಯಕ್ಷರಾಗಲಿದ್ದಾರೆ.

ವಿಲೀನದ ಬಳಿಕ ಸಂಸ್ಥೆಯ ನಿರ್ವಹಣೆಯಲ್ಲಿರುವ ಸಂಪತ್ತು ಮೌಲ್ಯವು ₹ 88,000 ಕೋಟಿಗಳಿಗೆ ಏರಿಕೆ ಆಗಲಿದೆ. ಒಟ್ಟು ಶಾಖೆಗಳ ಸಂಖ್ಯೆ 194, ಮೈಕ್ರೊ ಎಟಿಎಂ ಕೇಂದ್ರಗಳ ಸಂಖ್ಯೆ 9,100ಕ್ಕೆ ಏರಲಿದೆ ಹಾಗೂ 50 ಲಕ್ಷ ಗ್ರಾಹಕರು ಇರಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry