ಗುಜರಾತ್: ಹಡಗಿಗೆ ಬೆಂಕಿ–ಸಿಬ್ಬಂದಿ ರಕ್ಷಣೆ

7

ಗುಜರಾತ್: ಹಡಗಿಗೆ ಬೆಂಕಿ–ಸಿಬ್ಬಂದಿ ರಕ್ಷಣೆ

Published:
Updated:
ಗುಜರಾತ್: ಹಡಗಿಗೆ ಬೆಂಕಿ–ಸಿಬ್ಬಂದಿ ರಕ್ಷಣೆ

ಅಹಮದಾಬಾದ್: ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ತೈಲ ಹೊತ್ತು ಸಾಗುತ್ತಿದ್ದ ವಾಣಿಜ್ಯ ಹಡಗಿಗೆ ಬುಧವಾರ ಸಂಜೆ ಬೆಂಕಿ ತಗುಲಿದೆ. ಹಡಗಿನಲ್ಲಿ 30 ಸಾವಿರ ಟನ್ ಹೈಸ್ಪೀಡ್ ತೈಲ ಇತ್ತು.

ಕಾಂಡ್ಲಾದ ದೀನದಯಾಳ್ ಬಂದರಿನಿಂದ 15 ನಾಟಿಕಲ್ ಮೈಲು ದೂರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಡಗಿನ ಸಿಬ್ಬಂದಿ ಇದ್ದ ವಿಭಾಗಕ್ಕೆ ಬೆಂಕಿ ತಗುಲಿದೆ.

‘ಬುಧವಾರ ರಾತ್ರಿಯಿಡೀ ಬೆಂಕಿ ಆರಿಸುವ ಕಾರ್ಯ ನಡೆದಿದ್ದು, ಇನ್ನೂ ಮುಂದುವರಿದಿದೆ. ಹಡಗಿನಿಂದ ಸಮುದ್ರಕ್ಕೆ ತೈಲ ಸೋರಿಕೆ ಆಗಿಲ್ಲ’ ಎಂದು ಕರಾವಳಿ ರಕ್ಷಣಾ ಪಡೆ ಅಧಿಕಾರಿ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry