ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ಗಳ ದರ್ಜೆ ಪ್ರದರ್ಶನ ಕಡ್ಡಾಯ

Last Updated 18 ಜನವರಿ 2018, 18:57 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಹೋಟೆಲ್ ಯಾವ ದರ್ಜೆಯಲ್ಲಿ ಇದೆ ಎಂಬ ಮಾಹಿತಿ ಫಲಕವನ್ನು ಸ್ವಾಗತ ಪ್ರದೇಶದಲ್ಲಿ ಹಾಕುವುದು ಹಾಗೂ ತಮ್ಮ ಅಧಿಕೃತ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವುದು ಎಲ್ಲ ಹೋಟೆಲ್‌ಗಳಿಗೆ ಇನ್ನುಮುಂದೆ ಕಡ್ಡಾಯವಾಗಲಿದೆ.

ಪ್ರವಾಸೋದ್ಯಮ ಸಚಿವಾಲಯ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಈ ಅಂಶವಿದೆ.

ಹೋಟೆಲ್‌ಗಳು ಒದಗಿಸುವ ಸೌಲಭ್ಯಗಳ ಆಧಾರದಲ್ಲಿ ಐದು ದರ್ಜೆಗಳ‌ಲ್ಲಿ ವಿಂಗಡಿಸಿ, ಒಂದರಿಂದ ಐದರವರೆಗೆ ಸ್ಟಾರ್‌ಗಳನ್ನು ನೀಡಲಾಗುತ್ತದೆ.

‘ಹೋಟೆಲ್‌ ಉದ್ಯಮದಲ್ಲಿ ಪಾರದರ್ಶಕತೆ ತರಲು ಹಾಗೂ ಅವು ನೀಡುವ ಸೌಲಭ್ಯಗಳ ಕುರಿತು ಸರಳವಾಗಿ ಮಾಹಿತಿ ಸಿಗುವಂತಾಗಲು ಮಾರ್ಗಸೂಚಿಯಲ್ಲಿ ಈ ಅಂಶ ಹೇಳಲಾಗಿದೆ. ಈ ರೀತಿ ದರ್ಜೆಗಳನ್ನು ಪ್ರದರ್ಶಿಸುವುದರಿಂದ ತ್ವರಿತ ಸೇವೆ ನೀಡುವುದು ಸಾಧ್ಯ’ ಎಂದು ಸಚಿವಾಲಯ ತಿಳಿಸಿದೆ.

‘ಹೋಟೆಲ್‌ಗಳ ಆವರಣದಲ್ಲಿರುವ ಮದ್ಯದ ಅಂಗಡಿಗಳನ್ನು ಈ ನಿಯಮದ ಅಡಿ ಪರಿಗಣಿಸಲಾಗುವುದಿಲ್ಲ’ ಎಂದು ವಿವರಿಸಲಾಗಿದೆ. ಇದರ ಅನುಷ್ಠಾನಕ್ಕೆ 90 ದಿನಗಳ ಅವಧಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT