ನಿಷೇಧ ರದ್ದು ಮೇಲ್ಮನವಿಗೆ ನಕಾರ

7

ನಿಷೇಧ ರದ್ದು ಮೇಲ್ಮನವಿಗೆ ನಕಾರ

Published:
Updated:

ಮುಂಬೈ : ಹೊಸ ಗ್ರಾಹಕರ ಲೆಕ್ಕಪತ್ರ ತಪಾಸಣೆ ಮೇಲಿನ ಎರಡು ವರ್ಷಗಳ ‘ಸೆಬಿ’ ನಿಷೇಧಕ್ಕೆ ತಡೆ ನೀಡಬೇಕೆಂಬ ಲೆಕ್ಕಪತ್ರ ತಪಾಸಣಾ ದೈತ್ಯ ಸಂಸ್ಥೆ ಪ್ರೈಸ್‌ ವಾಟರ್‌ಹೌಸ್‌ನ (ಪಿಡಬ್ಲ್ಯು) ಮನವಿಯನ್ನು ಷೇರು ಮೇಲ್ಮನವಿ ನ್ಯಾಯಮಂಡಳಿಯು (ಎಸ್‌ಎಟಿ) ತಳ್ಳಿಹಾಕಿದೆ.

ಸತ್ಯಂ ಕಂಪ್ಯೂಟರ್‌ ಹಗರಣದಲ್ಲಿ ತಪ್ಪು ಎಸಗಿರುವುದು ಸಾಬೀತಾಗಿರುವ ಕಾರಣಕ್ಕೆ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ), ‘ಪಿಡಬ್ಲ್ಯು’ ಮೇಲೆ ಎರಡು ವರ್ಷಗಳ ನಿಷೇಧ ವಿಧಿಸಿತ್ತು. ‘ಪಿಡಬ್ಲ್ಯು’ ಮತ್ತು ಅದರ ಅಂಗ ಸಂಸ್ಥೆಗಳು ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಾರ್ಪೊ ರೇಟ್‌ಗಳ ಲೆಕ್ಕಪತ್ರಗ

ಳನ್ನು ಎರಡು ವರ್ಷಗಳ ಕಾಲ ತಪಾಸಣೆ ನಡೆಸದಂತೆ ನಿರ್ಬಂಧ ಹೇರಿದೆ. ಪ್ರೈಸ್‌ ವಾಟರ್‌ಹೌಸ್‌ ಬೆಂಗಳೂರು ಮತ್ತು ಅದರ ಈ ಹಿಂದಿನ ಪಾಲುದಾರ ಸಂಸ್ಥೆಗಳಾದ ಎಸ್‌. ಗೋಪಾಲಕೃಷ್ಣನ್‌ ಮತ್ತು ಶ್ರೀನಿವಾಸ್‌ ತಲ್ಲೂರಿ ಕಾನೂನುಬಾಹಿರವಾಗಿ ಮಾಡಿಕೊಂಡಿರುವ ₹ 13 ಕೋಟಿ ಲಾಭವನ್ನು ಶೇ 12ರ ಬಡ್ಡಿ ದರದಲ್ಲಿ 45 ದಿನಗಳಲ್ಲಿ ಪಾವತಿಸಬೇಕು ಎಂದೂ  ನಿರ್ದೇಶನ ನೀಡಲಾಗಿದೆ. ‘ಸೆಬಿ’ಯ ಈ ನಿಷೇಧದ ವಿರುದ್ಧ  ಸಂಸ್ಥೆಯು ಮೇಲ್ಮನವಿ ಸಲ್ಲಿಸಿತ್ತು.

ವಿಚಾರಣೆಯನ್ನು ಫೆಬ್ರುವರಿ 13ಕ್ಕೆ ಮುಂದೂಡಿರುವ ‘ಎಸ್‌ಎಟಿ’ಯು, ‘ಪಿಡಬ್ಲ್ಯು’ ಮತ್ತು ಅದರ ಅಂಗ ಸಂಸ್ಥೆಗಳು  2017–18ನೇ ಹಣಕಾಸು ಸಾಲಿನಲ್ಲಿ ತನ್ನ ಹಾಲಿ ಗ್ರಾಹಕರಿಗೆ ನೀಡುತ್ತಿರುವ ಸೇವೆಯನ್ನು ಮುಂದುವರೆಸಬಹುದಾಗಿದೆ ಎಂದು ತಿಳಿಸಿದೆ.

ಸತ್ಯಂ ಕಂಪ್ಯೂಟರ್ಸ್‌ನಲ್ಲಿ ತನ್ನ ಸಂಸ್ಥೆಗಳು ಮತ್ತು ಪಾಲುದಾರರು ಉದ್ದೇಶಪೂರ್ವಕವಾಗಿ ತಪ್ಪು ಎಸಗಿಲ್ಲ ಎಂದು ‘ಪಿಡಬ್ಲ್ಯು’ಪ್ರತಿಪಾದಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry