ನೂತನ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್‌ ರಾವತ್‌ ನೇಮಕ

7

ನೂತನ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್‌ ರಾವತ್‌ ನೇಮಕ

Published:
Updated:
ನೂತನ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್‌ ರಾವತ್‌ ನೇಮಕ

ನವದೆಹಲಿ: ಅಚಲ್‌ಕುಮಾರ್ ಜ್ಯೋತಿ ಅವರಿಂದ ತೆರವಾಗಲಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸ್ಥಾನಕ್ಕೆ ಓಂಪ್ರಕಾಶ್‌ ರಾವತ್‌ ಅವರನ್ನು ನೇಮಕ ಮಾಡಿರುವುದಾಗಿ ಕಾನೂನು ಸಚಿವಾಲಯ ಭಾನುವಾರ ತಿಳಿಸಿದೆ.

ಭಾರತ ಸರ್ಕಾರದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ರಾವತ್‌, ಮಧ್ಯಪ್ರದೇಶದ ನಿವೃತ್ತ ಐಎಎಸ್‌(1977ರ ಬ್ಯಾಚ್‌) ಅಧಿಕಾರಿಯೂ ಹೌದು. ಅವರಿಗೆ ಜನವರಿ 23ರಂದು ಅಚಲ್‌ಕುಮಾರ್ ಜ್ಯೋತಿ ಆಯೋಗದ ಅಧಿಕಾರ ಹಸ್ತಾಂತರಿಸಲಿದ್ದಾರೆ.

ಸದ್ಯ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರಲ್ಲದೆ ಮತ್ತಿಬ್ಬರು ಚುನಾವಣಾ ಆಯುಕ್ತರಿದ್ದು, ಸುನಿಲ್‌ ಅರೋರಾ ಹಾಗೂ ಅಶೋಕ್‌ ಲಾವಸ ಅವರು ರಾವತ್‌ ಜತೆ ಕಾರ್ಯನಿರ್ವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry