ರೌಡಿ ಶೀಟರ್‌ನ ಅಣ್ಣನ ಕೊಲೆ

7

ರೌಡಿ ಶೀಟರ್‌ನ ಅಣ್ಣನ ಕೊಲೆ

Published:
Updated:

ಮಂಗಳೂರು: ಇಲ್ಲಿಯ ಪಣಂಬೂರು ಠಾಣಾ ವ್ಯಾಪ್ತಿಯ ತಣ್ಣೀರುಬಾವಿಯ ಪ್ರದೇಶದ ಮನೆಯ ಮಾಳಿಗೆಯಲ್ಲಿ ಮಲಗಿದ್ದ ರೌಡ್‌ ಶೀಟರ್‌ನ ಅಣ್ಣನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಸೋಮವಾರ ಬೆಳಿಗ್ಗೆ 4.30ರಿಂದ 5 ಗಂಟೆಯ ಮಧ್ಯೆ ಈ ಘಟನೆ ನಡೆದಿದ್ದು, ಶಿವರಾಜ್‌ (45) ಕೊಲೆಯಾಗಿದ್ದಾರೆ. ಮೃತ ಶಿವರಾಜ್‌, ಮೆಂಡನ್‌ ಗ್ಯಾಂಗ್‌ನ ರೌಡಿಶೀಟರ್‌ ಭರತೇಶ್‌ ಎಂಬಾತನ ಅಣ್ಣ.

ಮಾಳಿಗೆಯ ಮೇಲೆ ನಿದ್ರಿಸುತ್ತಿದ್ದ ಶಿವರಾಜ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದ್ದು, ಶಿವರಾಜ್‌ ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿ ಗ್ಯಾಂಗ್‌ನ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಭರತೇಶ್‌ ಎಂದುಕೊಂಡು ಶಿವರಾಜ್‌ನ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಆರಂಭಿಸಿದ್ದಾರೆ ಎಂದು ಡಿಸಿಪಿ ಹನುಮಂತ್ರಾಯ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry