‘ಬೋಸ್ ಜನ್ಮದಿನಕ್ಕೆ ರಜೆ ಘೋಷಿಸಿ’

7

‘ಬೋಸ್ ಜನ್ಮದಿನಕ್ಕೆ ರಜೆ ಘೋಷಿಸಿ’

Published:
Updated:
‘ಬೋಸ್ ಜನ್ಮದಿನಕ್ಕೆ ರಜೆ ಘೋಷಿಸಿ’

ಕೋಲ್ಕತ್ತ: ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮದಿನದಂದು ರಾಷ್ಟ್ರೀಯ ರಜೆ ಘೋಷಣೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸ್ವಾತಂತ್ರ್ಯ ಹೋರಾಟಗಾರರಾದ ಅವರಿಗೆ ಸಲ್ಲಬೇಕಾದ ಗೌರವ ಇನ್ನೂ ಸಿಕ್ಕಿಲ್ಲ ಎಂದರು.

ಬೋಸ್ ಅವರ 121 ಜನ್ಮದಿನದ ನಿಮಿತ್ತ ‘ರೆಡ್ ರೋಡ್‌’ನಲ್ಲಿ ಪುಷ್ಪಗುಚ್ಚ ಇರಿಸಿ ಗೌರವ ಸೂಚಿಸಿದ ಮಮತಾ, ನೇತಾಜಿಯ ಕಣ್ಮರೆ ಬಗ್ಗೆ ಸತ್ಯ ತಿಳಿದುಕೊಳ್ಳಲು ದೇಶದ ಜನರು ಈಗಲೂ ಉತ್ಸುಕರಾಗಿದ್ದಾರೆ. ಕೇಂದ್ರ ಸರ್ಕಾರ ಇಲ್ಲಿಯವರೆಗೆ ರಾಷ್ಟ್ರೀಯ ರಜೆ ಘೋಷಿಸಿಲ್ಲ. ಆದರೆ, ಪಶ್ಚಿಮ ಬಂಗಾಳವು ಒಂದು ವರ್ಷದ ಹಿಂದೆಯೇ ಜನವರಿ 23 ಅನ್ನು ರಜಾ ದಿನವನ್ನಾಗಿ ಘೋಷಿಸಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry