ಭಾರತ–ಜಪಾನ್ ಪಂದ್ಯ ಇಂದು

7

ಭಾರತ–ಜಪಾನ್ ಪಂದ್ಯ ಇಂದು

Published:
Updated:
ಭಾರತ–ಜಪಾನ್ ಪಂದ್ಯ ಇಂದು

ಹ್ಯಾಮಿಲ್ಟನ್: ಈಗಾಗಲೇ ಫೈನಲ್‌ ಪ್ರವೇಶಿಸಿರುವ ಭಾರತ ಪುರು ಷರ ಹಾಕಿ ತಂಡ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶನಿವಾರ ಜಪಾನ್ ತಂಡವನ್ನು ಮಣಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ಎರಡನೇ ಆವೃತ್ತಿಯ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿ ಯಲ್ಲಿ ಭಾರತಕ್ಕೆ ಜಪಾನ್ ಸುಲಭದ ತುತ್ತಾಗುವ ನಿರೀಕ್ಷೆ ಇದೆ. ಮನ್‌ಪ್ರೀತ್ ಸಿಂಗ್ ಬಳಗವು ಲೀಗ್‌ನಲ್ಲಿ ಆತಿಥೇಯ ನ್ಯೂಜಿಲೆಂಡ್ ಎದುರು 3–2 ಹಾಗೂ ಬೆಲ್ಜಿಯಂ ವಿರುದ್ಧ 5–4 ಗೋಲುಗಳಿಂದ ಜಯಿಸಿತ್ತು. ಇದರಿಂದ ಭಾರತ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನ ಸಾಧಿಸಿದೆ.

ಮೊದಲ ಲೆಗ್‌ನಲ್ಲಿ ಜಪಾನ್ ತಂಡ ವನ್ನು ಭಾರತ 6–0 ಗೋಲುಗಳಿಂದ ಮಣಿಸಿತ್ತು. ಆದ್ದರಿಂದ ಈ ಪಂದ್ಯದಲ್ಲಿ ಭಾರತವೇ ಜಯಿಸುವ ನೆಚ್ಚಿನ ತಂಡವಾಗಿದೆ.

‘ಬೆಲ್ಜಿಯಂ ಎದುರು ಗೆದ್ದ ಬಳಿಕ ಭಾರತ ತಂಡ ವಿಶ್ವಾಸ ಹೆಚ್ಚಿಸಿ ಕೊಂಡಿದೆ. ಕೊನೆಯ ನಿಮಿಷಗಳಲ್ಲಿ ಗೋಲು ದಾಖಲಿಸುವ ಗುಣವನ್ನು ಜಪಾನ್ ತಂಡ ಹೊಂದಿದೆ. ಭಾರತ ಎಚ್ಚರಿಕೆಯಿಂದ ಆಡಬೇಕು’ ಎಂದು ಕೋಚ್ ಶೊರ್ಡ್ ಮ್ಯಾರಿಜ್‌ ಹೇಳಿದ್ದಾರೆ.

ಬೆಲ್ಜಿಯಂ ಎದುರಿನ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಭಾರತ ತಂಡದ ನಾಯಕ ಮನ್‌ಪ್ರೀತ್‌ ಜಪಾನ್ ಎದುರು ಆಡಲಿದ್ದಾರೆ. ನ್ಯೂಜಿಲೆಂಡ್ ಹಾಗೂ ಬೆಲ್ಜಿಯಂ ನಡುವಿನ ಪೈಪೋಟಿ ಬಳಿಕ ಫೈನಲ್‌ನಲ್ಲಿ ಭಾರತದ ಎದುರು ಆಡಲಿರುವ ತಂಡ ನಿರ್ಧಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry