ಅಪಾಯಕಾರಿ ವಸ್ತುಗಳಿಂದ ಮಕ್ಕಳನ್ನು ದೂರವಿರಿಸಿ, ಎಚ್ಚರವಹಿಸಿ: ಪೋಷಕರಿಗೆ ಮೋಹನ ಮರುಳಯ್ಯ ಸಲಹೆ

7

ಅಪಾಯಕಾರಿ ವಸ್ತುಗಳಿಂದ ಮಕ್ಕಳನ್ನು ದೂರವಿರಿಸಿ, ಎಚ್ಚರವಹಿಸಿ: ಪೋಷಕರಿಗೆ ಮೋಹನ ಮರುಳಯ್ಯ ಸಲಹೆ

Published:
Updated:
ಅಪಾಯಕಾರಿ ವಸ್ತುಗಳಿಂದ ಮಕ್ಕಳನ್ನು ದೂರವಿರಿಸಿ, ಎಚ್ಚರವಹಿಸಿ: ಪೋಷಕರಿಗೆ ಮೋಹನ ಮರುಳಯ್ಯ ಸಲಹೆ

ಜಗಳೂರು: ಮೂರು ವರ್ಷಕ್ಕಿಂತ ಒಳಗಿನ ಮಕ್ಕಳನ್ನು ನಾಣ್ಯ, ಬ್ಯಾಟರಿ, ಪಿನ್‌ಗಳಿಂದ ದೂರವಿರಿಸಿ, ಅವುಗಳ ಕೈಗಳಿಗೆ ಸಿಗದಂತೆ ಎಚ್ಚರ ವಹಿಸಿ ಎಂದು ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಜೆಜೆಎಂ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಮೋಹನ ಮರುಳಯ್ಯ ಸಲಹೆ ನೀಡಿದರು.

ಇಲ್ಲಿ ನಡೆಯುತ್ತಿರುವ ಸಿರಿಗೆರೆ ತರಳಬಾಳು ಬೃಹನ್ಮಠದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಶನಿವಾರ ‘ಮಕ್ಕಳ ಶಸ್ತ್ರ ಚಿಕಿತ್ಸೆಯ ಸವಾಲುಗಳು’ ವಿಷಯ ಕುರಿತು ಅವರು ಮಾತನಾಡಿದರು.

ಶೇಂಗಾ, ಕಡಲೆ, ಅಡಕೆ ಚೂರುಗಳನ್ನು ಮಕ್ಕಳಿಗೆ ಕೊಡಬೇಡಿ ಮತ್ತು ಅವು ಮಕ್ಕಳ ಕೈಗೆ ಸಿಗದಂತೆ ಜಾಗೃತಿ ವಹಿಸಿ ಎಂದು ಸಲಹೆ ನೀಡಿದರು.

ಸುಟ್ಟಗಾಯಗಳು ಆಗದಂತೆ ಎಚ್ಚರ ವಹಿಸಿ. ಮಕ್ಕಳು ಮೈ ಮೇಲೆ ಕಾದ ಎಣ್ಣೆ ಹಾಗೂ ಬಿಸಿ ನೀರು ಚೆಲ್ಲಿಕೊಂಡಾಗ ಸುಟ್ಟ ಗಾಯಗಳಾಗುತ್ತವೆ. ಬಿಸಿ ಕಾಫಿಯೂ ಮಕ್ಕಳ ಚರ್ಮಗನ್ನು ಸುಡುತ್ತವೆ. ಇದಕ್ಕೆ ಪ್ರಥಮ ಚಿಕಿತ್ಸೆ ತಣ್ಣೀರಿನಲ್ಲಿ 20 ನಿಮಿಷ ಸುಟ್ಟ ಭಾಗವನ್ನು ಇರಿಸಬೇಕು. ಬಳಿಕ ಆಸ್ಪತ್ರೆಗೆ ಕರೆ ತಂದರೆ ಚಿಕಿತ್ಸೆ ನೀಡಲಾಗುವುದು ಎಂದರು.

ದೀಪಾವಳಿಯಲ್ಲಿ ಮಕ್ಕಳು ಪಟಾಕಿ ಹಚ್ಚಿ ಗಾಯ ಮಾಡಿಕೊಳ್ಳುತ್ತಾರೆ. ಪಟಾಕಿಯಿಂದ ದೂರಿವಿರಿಸಿ. ವಿದ್ಯುತ್‌ ಶಾರ್ಟ್‌ ಸರ್ಕೀಟ್‌ ಉಂಟಾಗಿ ಸುಟ್ಟ ಗಾಯಗಳಾಗುತ್ತವೆ. ವಿದ್ಯುತ್‌ ತಾಗಿದಾಗ ಮೇನ್‌ ಸ್ವಿಚ್‌ ಆಫ್‌ ಮಾಡಿ ಅಥವಾ ಕೋಲಿನಿಂದ ಮಕ್ಕಳನ್ನು ಅಲ್ಲಿಂದ ತಳ್ಳಿ. ಕೈಯಿಂದ ಮುಟ್ಟಬೇಟಿ. ವಿದ್ಯುತ್‌ ಸ್ವಿಚ್‌ ಇರವ ಸಾಕೆಟ್‌ಗಳಲ್ಲಿ ಮಕ್ಕಳು ಪೆನ್ನು, ಪೆನ್ಸಿಲ್‌, ಬೆರಳು ಹಾಕದಂತೆ ನೋಡಿ, ವಯರ್‌ ಹೊರಗೆ ಬಂದಿದ್ದರೆ ಎಚ್ಚರೆ ವಹಿಸಿ ಎಂದು ಕಿವಿ ಮಾತು ಹೇಳಿದರು.

ಮಕ್ಕಳನ್ನು ನಾಣ್ಯದಿಂದ ದೂರವಿರಿಸಿ. ನಾನ್ಯ ನುಂಗಿ ಅಥವಾ ಬ್ಯಟರಿ ಬಟನ್‌ಗಳನ್ನೂ ನುಂಗಿ ಹೊಟ್ಟೆಗೆ ಹೋಗುತ್ತವೆ, ವಿಷಕಾರಿ ಪುಟ್ಟ ವಸ್ತುಗಳು ಶ್ವಾಸಕೋಶವನ್ನು ಸೇರುವ ಸಾಧ್ಯತೆಗಳಿವೆ. ಅದು ಜೀವಕ್ಕೆ ಅಪಾಯಕಾರಿ ಆದ್ದರಿಂದ ಎಚ್ಚರಿಕೆ ವಹಿಸಿ. ಇಲ್ಲದಿದ್ದರೆ ಅಪಾಯ ಎದುರಾಗುತ್ತದೆ. ಹೊಟ್ಟೆಯೊಳಗಿನ ವಸ್ತಗಳನ್ನು ತೆಗೆಯಲು ಶಸ್ತ್ರಚಿಕಿತ್ಸೆಯೂ ಅನಿವಾರ್ಯವಾಗಬಹುದು. ಇದಕ್ಕೆ ಅವಕಾಶ ಆಗದಂತೆ ಎಚ್ಚರ ವಹಿಸಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry