ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಣ್ಣು ಮಗು ಎಂಬ ಬೇಧ ಬೇಡ’

Last Updated 29 ಜನವರಿ 2018, 8:31 IST
ಅಕ್ಷರ ಗಾತ್ರ

ದೇವರ ಹಿಪ್ಪರಗಿ: ಸಮೀಪದ ನಿವಾಳ ಖೇಡ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಸಿಂದಗಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಕುಂಭಮೇಳವನ್ನು ಏರ್ಪಡಿಸಿ, ಕುಂಭಗಳ ಮೇಲೆ ಮಹಿಳೆಯ ಮಹತ್ವ ಸಾರುವ ಸಂದೇಶ ಬರೆದು ಹೆಣ್ಣು ಮಗು ಸೇರಿದಂತೆ ಮಹಿಳೆಯರ ಬಗ್ಗೆ ಅರಿವು ಮೂಡಿಸಲಾಯಿತು.

ದೇವರ ಹಿಪ್ಪರಗಿ ಬ ವಲಯದ ಮೇಲ್ವಿಚಾರಕಿ ದೀಪಾ ರಾಠೋಡ ಮಾತನಾಡಿ, ಮೊದಲು ಮನೆಯಲ್ಲಿ ಹೆಣ್ಣು ಗಂಡು ಎಂಬ ಭೇಧ ಭಾವ ತೊಡೆದು ಹಾಕಿ ಸಮಾನತೆಯಿಂದ ಕಾಣುವುದನ್ನು ಕಲಿತು. ಹೆಣ್ಣು ಮಗುವಿಗೂ ಉತ್ತಮ, ಉನ್ನತ ಗುಣಮಟ್ಟದ ಶಿಕ್ಷಣ ನೀಡಿ ಅವಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಮಗಳು ಹೆತ್ತವರಿಗೆ ಎಂದಿಗೂ ಭಾರವಲ್ಲ ಅವಳು ಮನೆ,ಮನ ಬೆಳುಗುವ ಜ್ಯೋತಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಂಚಾಯ್ತಿ ವ್ಯಾಪ್ತಿಯಡಿಯಲ್ಲಿ ಕೇವಲ ಹೆಣ್ಣು ಮಕ್ಕಳನ್ನು ಹೆತ್ತು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರನ್ನು ಸನ್ಮಾನಿಸಿ, ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆ ಸುನಂದಾ ತಳವಾರ, ಲಕ್ಷ್ಮಿ ಇಂಡಿ, ಶಾಂತಾಬಾಯಿ ಗೊಬ್ಬುರ, ಲಕ್ಷ್ಮಣ ಜಾಧವ, ಮುಖ್ಯಶಿಕ್ಷಕ ಕೆ.ಎಂ.ನಂದಿ, ಪಿ.ಜಿ.ಸಿಂದಗಿ, ಭಾರತಿ ಬೀಳಗಿ, ಕೇಶವ, ನಾಗೇಶ, ಅಂಗನವಾಡಿ ಕಾರ್ಯಕರ್ತೆಯರಾದ ಸಾವಿತ್ರಿ ಜೋಗುರ, ಪ್ರಭಾವತಿ ಕೊಣ್ಣುರ, ಸಾವಿತ್ರಿ ನಾಟೀಕಾರ, ಸಾವಿತ್ರಿ ಸುಂಗಠಾಣ, ಹೀನಾ ಕೌಸರ್, ಆರತಿ ದೊಡಮನಿ, ಎಸ್.ಎಸ್.ಕುಲಕರ್ಣಿ, ಅನಿತಾ ಮೆಳ್ಳಿಗೇರಿ ಇದ್ದರು.

‘ಮಹಿಳೆಗೆ ಸೌಲಭ್ಯದ ಅರಿವಿನ ಕೊರತೆ’

ವಿಜಯಪುರ: ಸ್ತ್ರೀಯರಿಗೆ ಸೌಲಭ್ಯಗಳ ಕುರಿತು ಅರಿವಿನ ಕೊರತೆಯಿಂದ ಲಿಂಗಬೇಧ ಸಮಸ್ಯೆ ಉಂಟಾಗುತ್ತಿದೆ ಎಂದು ಪಿಡಿಒ ರಾಜೇಶ್ವರಿ ತುಂಗಳ ಹೇಳಿದರು.

ತಾಲ್ಲೂಕಿನ ತೊರವಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಬಹುತೇಕ ಸೌಲಭ್ಯಗಳಿಂದ ವಂಚಿತರಾಗಿದ್ದು, ಇದರ ನಿವಾರಣೆಗಾಗಿ ಅವರಿಗೆ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಸ್ತ್ರೀಯರ ಕುರಿತು ಉತ್ತಮವಾಗಿ ಮಾತನಾಡಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾ ಯಿತು. ಶಹಜಾನ್ ಸಾಂಗ್ಲಿಕರ ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಜಯಶ್ರೀ, ಸುಶ್ಮಾ ಜೋಶಿ, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT