ದೀಪಕ್ ರಾವ್, ಬಶೀರ್ ಪ್ರಾಣ ಉಳಿಸಲು ಯತ್ನಿಸಿದವರಿಗೆ ನಗದು ಪುರಸ್ಕಾರ

7

ದೀಪಕ್ ರಾವ್, ಬಶೀರ್ ಪ್ರಾಣ ಉಳಿಸಲು ಯತ್ನಿಸಿದವರಿಗೆ ನಗದು ಪುರಸ್ಕಾರ

Published:
Updated:
ದೀಪಕ್ ರಾವ್, ಬಶೀರ್ ಪ್ರಾಣ ಉಳಿಸಲು ಯತ್ನಿಸಿದವರಿಗೆ ನಗದು ಪುರಸ್ಕಾರ

ಮಂಗಳೂರು: ಇತ್ತೀಚೆಗೆ ಮತೀಯ ದ್ವೇಷದಲ್ಲಿ ಕೊಲೆಗೀಡಾದ ದೀಪಕ್ ರಾವ್ ಮತ್ತು ಅಬ್ದುಲ್ ಬಶೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಲು ಪ್ರಯತ್ನಿಸಿದ ಅಬ್ದುಲ್ ಮಜೀದ್ ಹಾಗೂ ಶೇಖರ್ ಕುಲಾಲ್ ಅವರಿಗೆ ಕಲಬುರ್ಗಿಯ ವಕೀಲ ಪಿ. ವಿಲಾಸ್ ಕುಮಾರ್ ತಲಾ ₹ 50,000 ನಗದು ಪುರಸ್ಕಾರ ನೀಡಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಇಬ್ಬರಿಗೂ ಚೆಕ್ ಹಸ್ತಾಂತರಿಸಿದರು.

ದೀಪಕ್‌ ರಾವ್ ಕೊಲೆಯಾದ ಸಂದರ್ಭದಲ್ಲಿ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ್ದ ಮಜೀದ್, ಪ್ರಾಣ ಉಳಿಸಲು ಯತ್ನಿಸಿದ್ದರು. ಹಲ್ಲೆಗೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಶೀರ್ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದ ಶೇಖರ್, ಜೀವ ಕಾಪಾಡಲು ಪ್ರಯತ್ನ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry