ವಿರಾಟ್ ಕೊಹ್ಲಿ ಟ್ವೀಟ್‌ಗೆ ಅಸಮಾಧಾನ

7

ವಿರಾಟ್ ಕೊಹ್ಲಿ ಟ್ವೀಟ್‌ಗೆ ಅಸಮಾಧಾನ

Published:
Updated:
ವಿರಾಟ್ ಕೊಹ್ಲಿ ಟ್ವೀಟ್‌ಗೆ ಅಸಮಾಧಾನ

ಜೋಹಾನ್ಸ್‌ಬರ್ಗ್‌: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಟ್ವೀಟ್‌ಗೆ ಅಸಮಾಧಾನ ವ್ಯಕ್ತವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದು ಕೊಂಡ ಬಳಿಕ ಭಾರತ ತಂಡದ ಆಟ ಗಾರರು ಡ್ರೆಸಿಂಗ್ ಕೊಠಡಿಯಲ್ಲಿ ಸಂಭ್ರಮ ಆಚರಿಸಿದ್ದರು.

ಈ ಚಿತ್ರವನ್ನು ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು.  ‘ಇದು ಹೆಮ್ಮ ಪಡುವ ಸಂದರ್ಭ. ಎಲ್ಲಾ ಆಟಗಾರರಿಗೂ ಅಭಿನಂದನೆಗಳು. ಭಾರತ ತಂಡಕ್ಕೆ ಇದು ವಿಶೇಷವಾದ ದಿನ, ಜೈ ಹಿಂದ್‌’ ಎಂಬ ಸಂದೇಶ ಬರೆದಿದ್ದರು.

‘ಈ ಚಿತ್ರ ಹಾಗೂ ಬರಹವನ್ನು ನೋಡಿ ನನಗೆ ನಿಜಕ್ಕೂ ಆಶ್ಚರ್ಯ ವಾಗುತ್ತಿದೆ. ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ನಿಜವಾಗಿಯೂ ಉತ್ತ ಮವಾಗಿ ಆಡಿದೆಯಾ? ಎಂದು ನವೊಮಿ ದತ್ತಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಕೆಲವರು ಸರಣಿ ಸೋತಿರುವುದರ ಕುರಿತು ಟೀಕಿಸಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಕೊಹ್ಲಿ ಪರ ಸಂದೇಶ ಹಾಕಿದ್ದಾರೆ.

‘ಕೊನೆಯ ಪಂದ್ಯ ಗೆದ್ದಿದ್ದರಿಂದ ಭಾರತ ತಂಡ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಇದು ನಿಮಗೆ ಸಾಮಾನ್ಯ ಸಾಧನೆ ಎನಿ ಸಬಹುದು. ಎಲ್ಲ ಪಂದ್ಯಗಳಲ್ಲೂ  ಗೆಲ್ಲಲು ಸಾಧ್ಯವಿಲ್ಲ’ ಎಂದು ಕುಮಾರ್ ಗೌರವ್‌ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry