ಫೆಬ್ರುವರಿ 9ರಿಂದ ಪ್ರತಿಭಾ ಶೋಧ

7

ಫೆಬ್ರುವರಿ 9ರಿಂದ ಪ್ರತಿಭಾ ಶೋಧ

Published:
Updated:

ಮೂಡುಬಿದಿರೆ: ಭಾರತ ತಂಡದ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಫೆಬ್ರುವರಿ 9 ರಿಂದ 11ರವರೆಗೆ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ.

ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಯಾದ 11-14 ಮತ್ತು 15-17 ವರ್ಷದೊಳಗಿನ ಬಾಲಕ-ಬಾಲಕಿಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟು 230 ಕ್ರೀಡಾಪಟುಗಳು ಭಾಗ ವಹಿಸುವರು. ಅದರಲ್ಲಿ ಆಳ್ವಾಸ್‌ ಸಂಸ್ಥೆಯ 14 ಕ್ರೀಡಾಪಟುಗಳು ಇದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದ್ಧಾರೆ.

‘9ರಂದು ಬೆಳಿಗ್ಗೆ 9 ಗಂಟೆಯೊಳಗೆ ನೋಂದಣಿ ನಡೆಯ ಲಿದೆ. ಬಳಿಕ ಆಯ್ಕೆ ಪ್ರಕ್ರಿಯೆ, ಆಯ್ಕೆ ವಿಧಾನ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಉಪನ್ಯಾಸ ನಡೆಯಲಿದೆ.  10ರಂದು ಬೆಳಿಗ್ಗೆ 6ರಿಂದ 8ರ ವರೆಗೆ ಮೈದಾನದಲ್ಲಿ ತರಬೇತಿ, ಸಂಜೆ 4.30ಕ್ಕೆ ಉದ್ಘಾಟನೆ ಹಾಗೂ ತರಬೇತಿ ನಡೆಯಲಿದೆ. ಫೆ 11ರಂದು ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಮಟ್ಟಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇಲ್ಲಿ ಗೆದ್ದವರು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಗೆ  ಅರ್ಹರಾಗಲಿದ್ದಾರೆ‘ ಎಂದರು.

2020 ಮತ್ತು 2024ರಲ್ಲಿ ನಡೆ ಯುವ ಒಲಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಭಾರತ ತಂಡದ ರಚನೆಯ ಅಂಗವಾಗಿ ಎಲ್ಲ ರಾಜ್ಯಗಳಲ್ಲಿ ಪ್ರತಿಭಾಶೋಧ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry