ತಾಂತ್ರಿಕ ದೋಷ: ‘ಇ–ವೇ ಬಿಲ್’ ಮುಂದೂಡಿಕೆ

7

ತಾಂತ್ರಿಕ ದೋಷ: ‘ಇ–ವೇ ಬಿಲ್’ ಮುಂದೂಡಿಕೆ

Published:
Updated:

ನವದೆಹಲಿ: ದೇಶದಾದ್ಯಂತ ಫೆಬ್ರುವರಿ 1 ರಿಂದ ಜಾರಿಗೆ ಬರಬೇಕಿದ್ದ ಇ–ವೇ ಬಿಲ್‌ ವ್ಯವಸ್ಥೆಯನ್ನು ತಾಂತ್ರಿಕ ದೋಷದಿಂದಾಗಿ ಮುಂದೂಡಲಾಗಿದೆ.

ಜನವರಿ 14 ರಿಂದ ಜಾರಿಯಲ್ಲಿದ್ದ ಪ್ರಾಯೋಗಿಕ ಬಳಕೆ ಮುಂದುವರಿಯಲಿದೆ ಎಂದು ಕೇಂದ್ರೀಯ ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಇಸಿ) ಟ್ವೀಟ್‌ನಲ್ಲಿ ತಿಳಿಸಿದೆ.

ಇ–ವೇ ಬಿಲ್‌ ಜಾರಿಗೆ ಬಂದಿದೆ. ₹ 50,000 ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ಸರಕುಗಳನ್ನು 10 ಕಿ.ಮೀ ಆಚೆಗೆ ಸಾಗಿಸುವುದಕ್ಕ ಇ–ವೇ ಬಿಲ್ ಪಡೆಯುವುದು ಕಡ್ಡಾಯವಾಗಿದೆ.

ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜನವರಿ 16 ರಿಂದ ಜನವರಿ 30ದಿನಗಳ ಪ್ರಾಯೋಗಿಕ ಅವಧಿಯಲ್ಲಿ 28.4 ಲಕ್ಷ ಇ–ವೇ ಬಿಲ್‌ ಸೃಷ್ಟಿಯಾಗಿದೆ. ಮಂಗಳವಾರ ಒಂದೇ ದಿನ 3.4 ಲಕ್ಷ ಬಿಲ್‌ ಸೃಷ್ಟಿಯಾಗಿತ್ತು.

ಮುಂಚೂಣಿಯಲ್ಲಿ ಕರ್ನಾಟಕ: ಇ–ವೇ ಬಿಲ್‌ ಸೃಷ್ಟಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಒಟ್ಟು 14 ಲಕ್ಷ ಬಿಲ್‌ ಸೃಷ್ಟಿಯಾಗಿದೆ. ರಾಜಸ್ಥಾನ (26,500) ಮತ್ತು ಹರಿಯಾಣ (23,500) ನಂತರದ ಸ್ಥಾನದಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry