‘ಅಣ್ವಸ್ತ್ರ ದೋಚಲು ಹೊಂಚು’

7
ಸಂಚು ರೂಪಿಸುತ್ತಿರುವ ಭಯೋತ್ಪಾದಕರು: ದೇಶಗಳಿಗೆ ಅಮೆರಿಕ ಎಚ್ಚರಿಕೆ

‘ಅಣ್ವಸ್ತ್ರ ದೋಚಲು ಹೊಂಚು’

Published:
Updated:

ವಾಷಿಂಗ್ಟನ್ : ಕೆಲವು ದೇಶಗಳ ಶಸ್ತ್ರಾಸ್ತ್ರ ಸಂಗ್ರಹಾಗಾರದಿಂದ ಅಣ್ವಸ್ತ್ರಗಳನ್ನು ದೋಚಲು ಉಗ್ರರ ಗುಂಪುಗಳು ಹೊಂಚು ಹಾಕುತ್ತಿವೆ ಎಂದು ‌ಅಮೆರಿಕ ಎಚ್ಚರಿಸಿದೆ.

‘ಈ ನಿಟ್ಟಿನಲ್ಲಿ ಯಾವುದೇ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಅಥವಾ ಇತರರಿಂದ ಉಗ್ರರಿಗೆ ಸಹಕಾರ ದೊರೆಯುತ್ತಿದೆಯೇ ಎಂಬ ಕುರಿತು ಅಮೆರಿಕ ಹದ್ದಿನ ಕಣ್ಣಿಟ್ಟಿದೆ’ ಎಂದು ಅಮೆರಿಕ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಟಾಮ್ ಶಾನನ್ ಎಚ್ಚರಿಸಿದ್ದಾರೆ.

‘ಅಣ್ವಸ್ತ್ರ ಪ್ರಸರಣ ತಡೆ, ಅಣ್ವಸ್ತ್ರ ಪ್ರತಿರೋಧಕ, ಉಗ್ರ ನಿಗ್ರಹಕ್ಕೆ ಇಂಧನ ಇಲಾಖೆಯು ಹೆಚ್ಚಿನ ಒತ್ತು ನೀಡಿದೆ’ ಎಂದು ಇಂಧನ ಇಲಾಖೆ ಉಪ ಕಾರ್ಯ

ದರ್ಶಿ ಡಾನ್ ಬ್ರೌಯಿಲ್ಲೆಟ್ಟೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry