ಶುಕ್ರವಾರ, ಡಿಸೆಂಬರ್ 6, 2019
26 °C

ಜಯಕ್ಕೆ 2 ರನ್‌ ಬೇಕಿದ್ದಾಗ ಊಟದ ವಿರಾಮ: ಟೀಕೆ

Published:
Updated:
ಜಯಕ್ಕೆ 2 ರನ್‌ ಬೇಕಿದ್ದಾಗ ಊಟದ ವಿರಾಮ: ಟೀಕೆ

ಸೆಂಚೂರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 2ರನ್‌ ಬೇಕಿದ್ದಾಗ ಊಟದ ವಿರಾಮ ನೀಡಲಾಯಿತು. ಐಸಿಸಿಯ ಈ ನಿಯಮದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ಭಾರತ ತಂಡ 18 ಓವರ್‌ಗಳಲ್ಲಿ 117ರನ್‌ ಗಳಿಸಿದ್ದ ವೇಳೆ ಅಂಗಳದ ಅಂಪೈರ್‌ಗಳಾದ ಅಲೀಮ್‌ ದಾರ್‌ ಮತ್ತು ಆಡ್ರಿಯನ್‌ ಹೋಲ್ಡ್‌ಸ್ಟಾಕ್‌ ಅವರು 40 ನಿಮಿಷಗಳ ಭೋಜನ ವಿರಾಮ ನೀಡಿದರು. ಅಂಪೈರ್‌ಗಳ ಈ ನಿರ್ಧಾರವನ್ನು ಪಂದ್ಯದ ವೀಕ್ಷಕ ವಿವರಣೆಗಾರರು ಟೀಕಿಸಿದರು.

‘ಭಾರತದ ಗೆಲುವಿಗೆ 2 ರನ್‌ ಅಗತ್ಯವಿದ್ದಾಗ ಅಂಪೈರ್‌ಗಳು ವಿರಾಮ ನೀಡಿದ್ದು ನೋಡಿ ಪಿಎಸ್‌ಯು ಬ್ಯಾಂಕ್‌ ನ ಅಧಿಕಾರಿಗಳು ಸೇವೆ ಬಯಸಿ ಬರುವ ಗ್ರಾಹಕರಿಗೆ ‘ಊಟದ ನಂತರ ಬನ್ನಿ ಎಂದು ಹೇಳುವ ಮಾತು ನೆನಪಾಯಿತು’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)