ಸೋಮವಾರ, ಡಿಸೆಂಬರ್ 9, 2019
24 °C
ರಾಮನಗರ

ದನದ ಕೊಟ್ಚಿಗೆ ಹೊಕ್ಕ ಚಿರತೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದನದ ಕೊಟ್ಚಿಗೆ ಹೊಕ್ಕ ಚಿರತೆ ಸೆರೆ

ರಾಮನಗರ: ಇಲ್ಲಿನ ಸಂಗನಬಸವನದೊಡ್ಡಿ ಗ್ರಾಮದ ಮನೆಯೊಂದರ ದನದ ಕೊಟ್ಟಿಗೆ ಹೊಕ್ಕಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೋಮವಾರ ನಸುಕಿನಲ್ಲಿ ಸೆರೆ ಹಿಡಿದಿದ್ದಾರೆ.

ಮನೆಯಲ್ಲಿನ ಸಾಕು ನಾಯಿಯನ್ನು ಹಿಡಿಯುವ ಸಲುವಾಗಿ ಮುಂಜಾನೆ ಮೂರು ಗಂಟೆಯ ಸುಮಾರಿಗೆ ಚಿರತೆಯು ದನದ ಕೊಟ್ಟಿಗೆ ಸೇರಿತು‌. ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)