ಬುಧವಾರ, ಡಿಸೆಂಬರ್ 11, 2019
26 °C

ಇರಾನ್‌: ರಾಜಧಾನಿ ಪ್ರದೇಶದಲ್ಲಿ ದಟ್ಟ ಮಂಜು

ಪಿಟಿಐ Updated:

ಅಕ್ಷರ ಗಾತ್ರ : | |

ಇರಾನ್‌: ರಾಜಧಾನಿ ಪ್ರದೇಶದಲ್ಲಿ ದಟ್ಟ ಮಂಜು

ಟೆಹರಾನ್‌: ಇರಾನಿನ ರಾಜಧಾನಿ ಟೆಹರಾನ್‌ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಮಾಲಿನ್ಯದಿಂದಾಗಿ ದಟ್ಟ ಮಂಜು ಕವಿದಿದೆ.

ಇದರಿಂದಾಗಿ, ಅಲ್ಲಿನ ಪ್ರಾರ್ಥಮಿಕ ಶಾಲೆಗಳು ಮಂಗಳವಾರವೂ ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

‘ಅಧಿಕ ಮಾಲಿನ್ಯದ ಕಾರಣವಾಗಿ, ಸಂಚಾರಿ ನಿಯಮಗಳನ್ನು ಹೆಚ್ಚಿಸಲಾಗುವುದು. ವಾಹನಗಳ ಸಂಖ್ಯಾ ಫಲಕ ಅನುಸಾರವಾಗಿ ದಿನ ಬಿಟ್ಟು ದಿನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವು’ ಎಂದು ಅವರು ಹೇಳಿದರು.

ಮಕ್ಕಳು, ಗರ್ಭವತಿಯರು, ಹಿರಿಯ ನಾಗರಿಕರು ಮತ್ತು ಹೃದಯ ಸಂಬಂಧಿ ಖಾಯಿಲೆ ಹೊಂದಿರುವವರು ಮನಯಿಂದ ಹೊರ ಬರಬಾರದು ಎಂದು ಅಧಿಕಾರಿಗಳು ಕೋರಿದ್ದಾರೆ.

ತೆಹರಾನ್‌ನಲ್ಲಿ ಕಾಣಿಸಿಕೊಂಡಿರುವ ಈ ಪ್ರಮಾಣದ ಮಾಲಿನ್ಯಕ್ಕೆ ಅಲ್ಲಿನ ವಾಹನಗಳು ಉಗುಳುತ್ತಿರುವ ಹೊಗೆಯೇ ಕಾರಣ ಎಂದು ಇರಾನಿ ಮಾಧ್ಯಮ ವರದಿ ಮಾಡಿವೆ.

ಪ್ರತಿಕ್ರಿಯಿಸಿ (+)