ಸೋಮವಾರ, ಡಿಸೆಂಬರ್ 9, 2019
17 °C

ನಮ್ಮ ಪಾಸ್‌ವರ್ಡ್‌ಗಳು ಸುರಕ್ಷಿತವಲ್ಲ!

Published:
Updated:
ನಮ್ಮ ಪಾಸ್‌ವರ್ಡ್‌ಗಳು ಸುರಕ್ಷಿತವಲ್ಲ!

ಯಾರೊಬ್ಬರೂ ತಮ್ಮ ಬ್ಯಾಂಕ್‌ ಖಾತೆಗಳು ಮತ್ತು ಡಿಜಿಟಲ್ ಸಾಧನಗಳ ಭದ್ರತೆಗಾಗಿ ಇಟ್ಟುಕೊಂಡಿರುವ ಪಾಸ್‌ವರ್ಡ್‌ಗಳ ಗುಟ್ಟನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ನಿಮ್ಮ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವವರಿಗೆ ನಿಮ್ಮ ಪಾಸ್‌ವರ್ಡ್‌ ತಿಳಿದುಕೊಳ್ಳುವುದು ಅಷ್ಟೊಂದು ಕಷ್ಟವೇನಲ್ಲ!

ಮೊಬೈಲ್‌ಫೋನ್‌, ಲ್ಯಾಪ್‌ಟಾಪ್‌, ಇ–ಮೇಲ್‌, ಟ್ವಿಟರ್, ಫೇಸ್‌ಬುಕ್‌, ಡೋರ್‌ಲಾಕ್‌, ಡಿಜಿ ಲಾಕರ್, ವೈ–ಫೈ, ಮೊಬೈಲ್‌ ಬ್ಯಾಂಕಿಂಗ್, ನೆಟ್‌ ಬ್ಯಾಂಕಿಂಗ್‌, ಎಟಿಎಂ, ಆನ್‌ಲೈನ್‌ ಬ್ಯಾಂಕಿಂಗ್ ಹೀಗೆ ಹಲವು ಕಡೆ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದೇವೆ. ಎಷ್ಟೂ ಅಂತ ನೆನಪಿಟ್ಟುಕೊಳ್ಳಲು ಸಾಧ್ಯ?ಹೀಗಾಗಿ ಹಲವರು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಿರುವಂತಹ ಪಾಸ್‌ವರ್ಡ್‌ಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ‘ಸ್ಪ್ಯಾಷ್ ಡೇಟಾ’ ಎಂಬ ಆನ್‌ಲೈನ್‌ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಬಹಿರಂಗಪಡಿಸಿದೆ.

ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಲು ಅತಿ ಸುಲಭ ಪಾಸ್‌ವರ್ಡ್‌ಗಳೇ ಕಾರಣ ಎಂದು ತಿಳಿಸಿದೆ. ಇಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ಬಳಸಲೇ ಬಾರದಂತಹ ಕೆಲವು ಪಾಸ್‌ವರ್ಡ್‌ಗಳ ಬಗ್ಗೆಯೂ ತಿಳಿಸಿದೆ. ಅವುಗಳ ಮಾಹಿತಿ ಇಲ್ಲಿದೆ.

* 123456.... ವಿಶ್ವದಲ್ಲೇ ಅತಿ ಸುಲಭವಾದ ಮತ್ತು ಕೆಟ್ಟ ಪಾಸ್‌ವರ್ಡ್‌ ಇದೇ! ಕನಿಷ್ಠ ಆರು ಅಕ್ಷರಗಳು ಇರಬೇಕು ಎಂಬ ನಿಯಮ ಪರದೆ ಮೇಲೆ ಕಾಣಿಸಿಕೊಂಡ ಕೂಡಲೇ ಹಿಂದೆ–ಮುಂದೆ ನೋಡದೇ 123456 ಎಂದು ಒತ್ತುತ್ತಿದ್ದಾರೆ ಹಲವರು!

* ಎರಡನೇ ಅತಿ ಕೆಟ್ಟ ಪಾಸ್‌ವರ್ಡ್‌ ‘PASSWORD’! ಪಾಸ್‌ವರ್ಡ್‌ ಎಂಬ ಪದವನ್ನೇ ಹಲವು ಬುದ್ಧಿವಂತರು ತಮ್ಮ ಖಾತೆಗಳಿಗೆ ರಹಸ್ಯಪದಗಳಾಗಿ ಇಟ್ಟುಕೊಳ್ಳುತ್ತಿದ್ದಾರೆ.

* 12345678 ಆರು ಅಂಕಿಗಳು ಎಂದು

ಹೇಳಿದ ಕೂಡಲೇ ಆರು ಅಂಕಿಗಳನ್ನೇ ಇಡುವುದು ಅಷ್ಟೊಂದು ಒಳ್ಳೆಯದಲ್ಲ ಎಂದು ಭಾವಿಸಿದ ಹಲವರು 7ಮತ್ತು 8ಅನ್ನು ಸೇರಿಸಿ ಎಂಟು ಅಂಕಿಗಳ ಪಾಸ್‌ವರ್ಡ್‌ ಇಟ್ಟುಕೊಂಡಿದ್ದಾರೆ. ವಿಶ್ವದ ಮೂರನೇ ಅತಿ ಸುಲಭ ಪಾಸ್‌ವರ್ಡ್ ಇದು.

* QWERTY ನಾವು ನಿತ್ಯ ಬಳಸುವ ಕಂಪ್ಯೂಟರ್ ಕೀಲಿಮಣೆಯಲ್ಲಿ ಇರುವ ಮೊದಲ ಅಕ್ಷರಗಳು ಇವು. ಇವನ್ನೇ ಹಲವರು ತಮ್ಮ ಖಾತೆಗಳಿಗೆ ಪಾಸ್‌ವರ್ಡ್‌ ಮಾಡಿದ್ದಾರೆ. ಅತಿ ಸುಲಭವಾಗಿ ತಿಳಿದುಕೊಳ್ಳಬಹುದಾದ ಪಾಸ್‌ವರ್ಡ್‌ಗಳಲ್ಲಿ ಇದಕ್ಕೆ ನಾಲ್ಕನೇ ಸ್ಥಾನ.

* ‘12345’ ಐದನೇ ಸ್ಥಾನವನ್ನು, ‘123456789’ ಆರನೇ ಸ್ಥಾನವನ್ನು, ‘1234567’ ಎಂಟನೇ ಸ್ಥಾನವನ್ನು ಪಡೆದಿವೆ. ‘what ever’ ಪಾಸ್‌ವರ್ಡ್‌ಗೆ 7ನೇ ಸ್ಥಾನ ಲಭಿಸಿದೆ. LETMEIN ಪದವೂ ಹಲವು ಬಾರಿ 7ನೇ ಸ್ಥಾನ ಪಡೆದಿತ್ತು.

* ‘111111’ 9ನೇ ಸ್ಥಾನದಲ್ಲಿದ್ದು, ಡ್ರ್ಯಾಗನ್ 10ನೇ ಸ್ಥಾನವನ್ನು ಪಡೆದಿದೆ.

* I LOVE YOU, HELLO, FREEDOM, MONKEY, TRUST NUMBER1, ಈ ಪಾಸ್‌ವರ್ಡ್‌ಗಳೂ ಅತಿ ಸುಲಭವಾಗಿ ಗ್ರಹಿಸಬಹುದಾದ ಪಾಸ್‌ವರ್ಡ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

* ನೆಟ್‌ ಬಳಕೆದಾರರಲ್ಲಿ ಶೇ 3ರಷ್ಟು ಮಂದಿ ಅತಿ ಸುಲಭವಾಗಿ ಪತ್ತೆ ಮಾಡಬಹುದಾದಂತಹ ಪಾಸ್‌ವರ್ಡ್‌ಗಳನ್ನೇ ಬಳಸುತ್ತಿದ್ದಾರೆ. ಹ್ಯಾಕರ್‌ಗಳು, ಸೈಬರ್‌ ಅಪರಾಧಿಗಳು ನಮ್ಮವರೆಗೂ ಬರೋಕೆ ಸಾಧ್ಯ ಇಲ್ಲ ಬಿಡು ಎಂಬ ಧೋರಣೆ ಇವರದ್ದು.

* ಪ್ರತಿ 10ರಲ್ಲಿ ಒಬ್ಬರು ಸ್ಲ್ಯಾಶ್ ಡೇಟಾ ಪಟ್ಟಿ ಮಾಡಿರುವ 25 ಅತಿ ಸುಲಭ ಪಾಸ್‌ವರ್ಡ್‌ಗಳಲ್ಲಿ ಯಾವುದೋ ಒಂದನ್ನು  ಬಳಸುತ್ತಿದ್ದಾರೆ.

ಹೇಗೆ ಬಳಸುತ್ತಿದ್ದಾರೆ?

* ಸುಮಾರು 50 ಲಕ್ಷ ಜನರಿಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇತರರು ಊಹಿಸಲಾಗದ ಪಾಸ್‌ವರ್ಡ್‌ಗಳನ್ನು ಬಳಸದಿರುವುದೇ ಎಂದು ಡೇಟಾ ಸ್ಲ್ಯಾಶ್ ತಿಳಿಸಿದೆ.

* ಶೇ 40ರಷ್ಟು ನೆಟ್‌ ಬಳಕೆದಾರರು ಒಮ್ಮೆ ಪಾಸ್‌ವರ್ಡ್‌ ಜೋಡಿಸಿ ಇಟ್ಟರೆ, ಎಷ್ಟು ವರ್ಷಗಳಾದರೂ ಅದನ್ನು ಪುನಃ ಬದಲಾಯಿಸಲು ಆಸಕ್ತಿ ತೋರುತ್ತಿಲ್ಲ!

* ಶೇ 60 ರಷ್ಟು ನೆಟ್‌ ಬಳಕೆದಾರರು ಒಂದೇ ರಹಸ್ಯ ಪದವನ್ನು ನಾಲ್ಕೈದು ಕಡೆ (ಫೇಸ್‌ಬುಕ್‌, ಟ್ವಿಟರ್, ಮೇಲ್, ಮೊಬೈಲ್‌ಫೋನ್‌) ಬಳಸುತ್ತಿದ್ದಾರೆ.

* ಕೇವಲ ಶೇ 37ರಷ್ಟು ಮಂದಿ ಮಾತ್ರ ತಿಂಗಳಿಗೊಮ್ಮೆ ಪಾಸ್‌ವರ್ಡ್‌ ಬದಲಾಯಿಸಲು ಆಸಕ್ತಿ ತೋರಿಸುತ್ತಿದ್ದಾರೆ.

* ಶೇ 90ರಷ್ಟು ಉದ್ಯೋಗಿಗಳು ತಮ್ಮ ಖಾತೆಗಳು ಮತ್ತು ಸಾಧನಗಳಿಗೆ ಬಳಸುತ್ತಿರುವ ಪಾಸ್‌ವರ್ಡ್‌ಗಳು ಕೇವಲ ಆರು ಗಂಟೆಯಲ್ಲಿ ಹ್ಯಾಕಿಂಗ್‌ಗೆ ಗುರಿಯಾಗುತ್ತಿವೆ.

* ಶೇ 25ರಷ್ಟು ಮಂದಿ ತಮ್ಮ ಮನೆ ಹೆಸರನ್ನೇ ಪಾಸ್‌ವರ್ಡ್‌ ಮಾಡಿಕೊಂಡಿದ್ದಾರೆ.

* ಕುಟುಂಬ ಸದಸ್ಯರ ಹೆಸರುಗಳಿಗಿಂತ, ತಮ್ಮ ಸಾಕು ಪ್ರಾಣಿಗಳ ಹೆಸರುಗಳನ್ನೇ ಪಾಸ್‌ವರ್ಡ್‌ಗಳಾಗಿ ಬಳಸಿಕೊಳ್ಳಲು ಹಲವರು ಆಸಕ್ತಿ ತೋರಿಸುತ್ತಿದ್ದಾರೆ.

* ಅತ್ಯಂತ ಗೋಪ್ಯವಾಗಿ ಇಡಬೇಕಾದ ದಾಖಲೆಗಳಿಗೆ ಕೆಲವರು MARRY ME, LOVE YOU, ETERNITY ಮುಂತಾದ ರೋಮ್ಯಾಂಟಿಕ್ ಪದಗಳನ್ನು ಪಾಸ್‌ವರ್ಡ್‌ಗಳಾಗಿ ಮಾಡಿಕೊಂಡಿದ್ದಾರೆ.⇒v

ಪ್ರತಿಕ್ರಿಯಿಸಿ (+)