ಮಂಗಳವಾರ, ಡಿಸೆಂಬರ್ 10, 2019
26 °C

ಬಾಂಗ್ಲಾದಲ್ಲಿ ಆಡಲಿರುವ ಸಲ್ಮಾನ್ ಬಟ್‌

Published:
Updated:
ಬಾಂಗ್ಲಾದಲ್ಲಿ ಆಡಲಿರುವ ಸಲ್ಮಾನ್ ಬಟ್‌

ಢಾಕಾ: ಸ್ಪಾಟ್ ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ಐದು ವರ್ಷಗಳ ನಿಷೇಧಕ್ಕೆ ಒಳಗಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್‌ ಬಾಂಗ್ಲಾದೇಶದಲ್ಲಿ ಆಡಲು ಸಜ್ಜಾಗಿದ್ದಾರೆ.

ಇಲ್ಲಿ ನಡೆಯಲಿರುವ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನುಮತಿ ನೀಡಿದೆ. ಲೀಗ್‌ನಲ್ಲಿ ಅವರು ಮಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್ ಪರವಾಗಿ ಆಡಲಿದ್ದಾರೆ. ಬಾಂಗ್ಲಾದೇಶದ ಆಲ್‌ರೌಂಡ್ ಆಟಗಾರ ಶಕೀಬ್ ಅಲ್ ಹಸನ್ ಈ ತಂಡದ ನಾಯಕ. ಬುಧವಾರ ಬ್ರದರ್ಸ್ ಯೂನಿಯನ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಬಟ್‌ ಲೀಗ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ಪ್ರತಿಕ್ರಿಯಿಸಿ (+)