ಸಕ್ಕರೆ ಆಮದು ಸುಂಕ ಶೇ 100ಕ್ಕೆ ಏರಿಕೆ

7

ಸಕ್ಕರೆ ಆಮದು ಸುಂಕ ಶೇ 100ಕ್ಕೆ ಏರಿಕೆ

Published:
Updated:

ನವದೆಹಲಿ: ಕೇಂದ್ರ ಸರ್ಕಾರ ಸಕ್ಕರೆ ಮೇಲಿನ ಆಮದು ಸುಂಕವನ್ನು ಶೇ 100ಕ್ಕೆ ಏರಿಕೆ ಮಾಡಿದೆ. ಈ ಮೊದಲು ಶೇ 50ರಷ್ಟಿತ್ತು.

ಆಮದು ಸುಂಕವನ್ನು ಹೆಚ್ಚಿಸುವಂತೆ ಆಹಾರ ಸಚಿವಾಲಯವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಅಗ್ಗದ ಬೆಲೆಗೆ ಆಮದಾಗುವುದನ್ನು ತಪ್ಪಿಸಲು, ಸಗಟು ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ನಿಯಂತ್ರಿಸಲು ಹಾಗೂ ರೈತರಿಗೆ ಸಕಾಲಕ್ಕೆ ಕಬ್ಬಿನ ಬೆಲೆ ಪಾವತಿಸಲು ಅನುಕೂಲ ಆಗುವಂತೆ ಆಮದು ಸುಂಕ ಹೆಚ್ಚಿಸಬೇಕು ಎಂದು ಹೇಳಿತ್ತು.

ತಯಾರಿಕಾ ಹಂತದಲ್ಲಿ ಅಂದರೆ ಯಾವುದೇ ತೆರಿಗೆ, ಶುಲ್ಕ ಒಳಗೊಳ್ಳದ ಸಕ್ಕರೆ ಬೆಲೆ ಪ್ರತಿ ಕೆ.ಜಿಗೆ ₹29.50 ರಿಂದ ₹ 39ರಷ್ಟಿದೆ. ಇದು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಇದೆ. ಹೀಗಾಗಿ ದೇಶಿ ಬೆಳೆಗಾರರ ಹಿತರಕ್ಷಣೆಗಾಗಿ ಆಮದು ಮೇಲಿನ ಸುಂಕ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 40 ರಿಂದ ₹ 42ರಂತೆ ಮಾರಾಟವಾಗುತ್ತಿದೆ.

ಸಕ್ಕರೆ ಉತ್ಪಾದನೆ (ಕೋಟಿ ಟನ್‌ಗಳಲ್ಲಿ)

2.03

2016–17ರಲ್ಲಿ

2.61

2017–18ಕ್ಕೆ ನಿರೀಕ್ಷೆ

2.50

ದೇಶಿ ಬಳಕೆ ಪ್ರಮಾಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry