ಮಂಗಳವಾರ, ಡಿಸೆಂಬರ್ 10, 2019
20 °C

ಬಾಡಿಗೆ ತಾಯಿಯಿಂದ ಮಗು ಪಡೆಯುವ ಮಹಿಳಾ ಉದ್ಯೋಗಿಗಳಿಗೂ ಸಿಗಲಿದೆ ಹೆರಿಗೆ ರಜೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬಾಡಿಗೆ ತಾಯಿಯಿಂದ ಮಗು ಪಡೆಯುವ ಮಹಿಳಾ ಉದ್ಯೋಗಿಗಳಿಗೂ ಸಿಗಲಿದೆ ಹೆರಿಗೆ ರಜೆ

ನವದೆಹಲಿ: ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯುವ ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳಿಗೂ 26 ವಾರಗಳ (180 ದಿನ) ಸಂಬಳ ಸಹಿತ ಹೆರಿಗೆ ರಜೆ ನೀಡಲಾಗುವುದು ಎಂದು ಸಿಬ್ಬಂದಿ ಸಚಿವಾಲಯ ಹೇಳಿದೆ.

ಈ ಸಂಬಂಧ, ದೆಹಲಿ ಹೈಕೋರ್ಟ್ 2015ರಲ್ಲಿ ನೀಡಿದ ಆದೇಶದ ಅನ್ವಯ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಿಗೂ ಸಚಿವಾಲಯ ಪತ್ರ ಬರೆದಿದೆ.

ಹೈಕೋರ್ಟ್ ಆದೇಶವೇನು?: ಕೇಂದ್ರೀಯ ವಿದ್ಯಾಲಯದ ಶಿಕ್ಷಕಿಯೊಬ್ಬರು ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು. ಹೀಗಾಗಿ ಅವರಿಗೆ ಹೆರಿಗೆ ರಜೆ ನೀಡಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿ ತೀರ್ಪು ನೀಡಿದ್ದ ನ್ಯಾಯಾಲಯ, ‘ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುವ ಮಹಿಳಾ ಉದ್ಯೋಗಿಯೂ (ನಿಯೋಜಿತ ತಾಯಿ) ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ’ ಎಂದು ಹೇಳಿತ್ತು.

ಪ್ರತಿಕ್ರಿಯಿಸಿ (+)