ಶುಕ್ರವಾರ, ಡಿಸೆಂಬರ್ 13, 2019
27 °C

ಮಾರುತಿ: ಹೊಸ ಸ್ವಿಫ್ಟ್‌ ಮಾರುಕಟ್ಟೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಮಾರುತಿ: ಹೊಸ ಸ್ವಿಫ್ಟ್‌ ಮಾರುಕಟ್ಟೆಗೆ

ನವದೆಹಲಿ: ದೇಶದ ಅತಿದೊಡ್ಡ ಕಾರ್‌ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ), ಗ್ರೇಟರ್‌ ನೊಯಿಡಾದಲ್ಲಿ ನಡೆಯುತ್ತಿರುವ ವಾಹನ ಮೇಳದಲ್ಲಿ ತನ್ನ ಹೊಸ ಸ್ವಿಫ್ಟ್‌ ಕಾರ್‌ ಪರಿಚಯಿಸಿದೆ.

‘ಭಾರತದ ಗ್ರಾಹಕರು ಬದಲಾಗುತ್ತಿದ್ದಾರೆ. ಅವರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಉತ್ಪನ್ನ, ತಂತ್ರಜ್ಞಾನ ಮತ್ತು ಕಾರ್‌ ಚಾಲನೆಯ ಅನುಭವದಲ್ಲಿ ಸಂಸ್ಥೆಯು ಹೊಸತನ ಅಳವಡಿಸಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಆಯುಕವಾ ಹೇಳಿದ್ದಾರೆ.

ಇದು ಪೆಟ್ರೋಲ್‌ ಮತ್ತು ಡೀಸೆಲ್‌ ಚಾಲಿತ ಮಾದರಿಯಲ್ಲಿ ಲಭ್ಯ ಇರಲಿದೆ. ಆಟೊ ಗೇರ್‌ ಶಿಫ್ಟ್‌ ಸೌಲಭ್ಯ ಇದರಲ್ಲಿ ಇದೆ. ಡ್ಯುಯೆಲ್ ಏರ್‌ಬ್ಯಾಗ್‌ ಮತ್ತಿತರ ಸುರಕ್ಷತಾ ಸೌಲಭ್ಯ ಒಳಗೊಂಡಿದೆ.

ಇದರ ಆರಂಭಿಕ ಕೊಡುಗೆ ಬೆಲೆ ₹ 4.99 ಲಕ್ಷದಿಂದ ₹ 8.29 ಲಕ್ಷ (ದೆಹಲಿ ಎಕ್ಸ್‌ಷೋರೂಂ) ಇರಲಿದೆ. ಜನವರಿಯಲ್ಲಿಯೇ ಈ ಹೊಸ ಕಾರ್ ಬುಕಿಂಗ್‌ ಆರಂಭಿಸಲಾಗಿದೆ.

ಹೊಸ ಸ್ವಿಫ್ಟ್‌ ಅಭಿವೃದ್ಧಿಪಡಿಸಲು ಸಂಸ್ಥೆ ₹ 800 ಕೋಟಿ ವೆಚ್ಚ ಮಾಡಿದೆ. ಪ್ರತಿ ತಿಂಗಳೂ ಸರಾಸರಿ 15 ಸಾವಿರ ಸ್ವಿಫ್ಟ್‌ ಮಾರಾಟವಾಗುತ್ತಿವೆ. ಹೊಸ ಸ್ವಿಫ್ಟ್‌ ಕಾರಣಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಲಿದೆ ಎಂದು ಸಂಸ್ಥೆ ನಿರೀಕ್ಷಿಸಿದೆ.

ಪ್ರತಿಕ್ರಿಯಿಸಿ (+)