ಭಾನುವಾರ, ಡಿಸೆಂಬರ್ 8, 2019
25 °C

ನಿವೃತ್ತಿ ಸುಳಿವು ನೀಡಿದ ಮಾಲಿಂಗ

Published:
Updated:
ನಿವೃತ್ತಿ ಸುಳಿವು ನೀಡಿದ ಮಾಲಿಂಗ

ಸೇಂಟ್‌ ಮಾರ್ಟಿಜ್‌, ಸ್ವಿಟ್ಜರ್ಲೆಂಡ್‌: ಶ್ರೀಲಂಕಾದ ವೇಗಿ ಲಸಿತ್‌ ಮಾಲಿಂಗ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಸುಳಿವು ನೀಡಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಐಪಿಎಲ್‌ ಹರಾಜಿನಲ್ಲಿ ಯಾವ ಫ್ರಾಂಚೈಸ್ ಕೂಡ ಖರೀದಿ ಮಾಡಿರಲಿಲ್ಲ.

ಆದರೆ ತಂಡದ ಬೌಲಿಂಗ್‌ ಸಲಹೆಗಾರರಾಗಿ ಬುಧವಾರ ಅವರನ್ನು ಮುಂಬೈ ಇಂಡಿಯನ್ಸ್‌ ನೇಮಕ ಮಾಡಿತ್ತು. ಕಳೆದೊಂದು ದಶಕದಲ್ಲಿ ಮುಂಬೈ ಇಂಡಿಯನ್ಸ್‌ ಗೆಲುವಿನಲ್ಲಿ ಮಾಲಿಂಗ ಪ್ರಮುಖ ಪಾತ್ರ ವಹಿಸಿದ್ದರು.

‘ಇನ್ನು ಹೆಚ್ಚು ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಲು ಸಾಧ್ಯವಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಸದ್ಯದಲ್ಲೇ ನಿವೃತ್ತಿಯ ನಿರ್ಧಾರ ಪ್ರಕಟಿಸಲಿದ್ದೇನೆ’ ಎಂದು ಇಲ್ಲಿ ನಡೆಯುತ್ತಿರುವ ಐಸ್‌ ಕ್ರಿಕೆಟ್‌ ಚಾಲೆಂಜ್‌ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

‘ಶ್ರೀಲಂಕಾ ಕ್ರಿಕೆಟ್‌ ಬಗ್ಗೆ ಮಾತನಾಡುವುದಿಲ್ಲ, ಒಮ್ಮೆ ಅಲ್ಲಿಗೆ ಹಿಂತಿರುಗಿದ ಬಳಿಕ ದೇಶಿಯ ಕ್ರಿಕೆಟ್‌ಗೆ ನನ್ನ ದೇಹ ಯಾವ ರೀತಿ ಸ್ಪಂದಿಸುತ್ತದೆ ಎಂದು ಕಾದು ನೋಡುತ್ತೇನೆ. ಸದ್ಯ ನನ್ನ ಐಪಿಎಲ್‌ ಆಟವೂ ಮುಕ್ತಾಯಗೊಂಡಿದ್ದು, ಮುಂಬೈ ಇಂಡಿಯನ್ಸ್‌ ತಂಡದೊಂದಿಗೆ ಹೊಸ ಅಧ್ಯಾಯ ಆರಂಭಿಸಲಿದ್ದೇನೆ. ನನ್ನ ಅನಿಸಿಕೆ ಪ್ರಕಾರ ನಾನು ಮತ್ತೆ ಆಡಲಿದ್ದೇನೆ ಎಂದು ಅನ್ನಿಸುತ್ತಿಲ್ಲ’ ಎಂದು ಅವರು ತಿಳಿಸಿದ್ದಾರೆ.

’ನನ್ನನ್ನು ಐಪಿಎಲ್ ಫ್ರಾಂಚೈಸ್‌ಗಳು ಖರೀದಿ ಮಾಡದೇ ಇರುವುದರಿಂದ ಬೇಸರ ಉಂಟಾಗಿಲ್ಲ. 10 ವರ್ಷ ಮುಂಬೈ ಇಂಡಿಯನ್ಸ್‌ ತಂಡದ ಜೊತೆಗಿದ್ದು ಸಾಕಷ್ಟು ಸಾಧನೆ ಮಾಡಿದ್ದೇನೆ’ ಎಂದರು.

ಪ್ರತಿಕ್ರಿಯಿಸಿ (+)