ಬುಧವಾರ, ಡಿಸೆಂಬರ್ 11, 2019
23 °C

ಸಕ್ಕರೆ ರಫ್ತು ಸುಂಕ ರದ್ದು: ಚಿಂತನೆ

Published:
Updated:
ಸಕ್ಕರೆ ರಫ್ತು ಸುಂಕ ರದ್ದು: ಚಿಂತನೆ

ನವದೆಹಲಿ: ಸಕ್ಕರೆ ಮೇಲಿನ ರಫ್ತು ಸುಂಕವನ್ನು ಸಂಪೂರ್ಣವಾಗಿ ರದ್ದುಪಡಿಸುವುದನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

‘ದೇಶಿ ಸಕ್ಕರೆ ಉತ್ಪಾದನೆ ಹೆಚ್ಚಳಗೊಂಡು ಬೆಲೆ ಕುಸಿತ  ಕಾಣುತ್ತಿರುವುದರಿಂದ ರಫ್ತು ಹೆಚ್ಚಿಸಲು ಉದ್ದೇಶಿಸಲಾಗಿದೆ’ ಎಂದು ಕೇಂದ್ರ ಆಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

‘ಸದ್ಯಕ್ಕೆ ಸಕ್ಕರೆ ರಫ್ತು ಮೇಲೆ ಶೇ 20ರಷ್ಟು ಸುಂಕ ವಿಧಿಸಲಾಗುತ್ತಿದೆ. 2017–18ರ ಸಕ್ಕರೆ ಋತುವಿನಲ್ಲಿ (ಅಕ್ಟೋಬರ್‌ – ಸೆಪ್ಟೆಂಬರ್‌) ದೇಶಿ ಸಕ್ಕರೆ ಉತ್ಪಾದನೆಯು 2.49 ಕೋಟಿ ಟನ್‌ಗಳಿಗೆ ಏರಿಕೆಯಾಗಲಿದೆ. ಉದ್ದಿಮೆಯ ಅಂದಾಜು ಇದಕ್ಕಿಂತ (2.6 ಕೋಟಿ ಟನ್‌) ಹೆಚ್ಚಿಗೆ ಇದೆ.  ಹಿಂದಿನ ವರ್ಷ ಇದು 2.02 ಕೋಟಿ ಟನ್‌ಗಳಷ್ಟಿತ್ತು. ಸಕ್ಕರೆಯ ವಾರ್ಷಿಕ ಬೇಡಿಕೆ ಪ್ರಮಾಣ 2.4 ರಿಂದ 2.5 ಕೋಟಿ ಟನ್‌ಗಳಷ್ಟಿದೆ’ ಎಂದು ಪಾಸ್ವಾನ್‌ ಹೇಳಿದ್ದಾರೆ.

‘ಸಕ್ಕರೆ ಉತ್ಪಾದನೆ ಹೆಚ್ಚಳದ ಕಾರಣಕ್ಕೆ ಸರ್ಕಾರ ಈಗಾಗಲೇ ಅಗ್ಗದ ದರದಲ್ಲಿ ಸಕ್ಕರೆ ಆಮದು, ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದಿಂದ ನಿರ್ಬಂಧಿಸಲು ಆಮದು ಸುಂಕವನ್ನು ಶೇ 100ಕ್ಕೆ ಹೆಚ್ಚಿಸಿದೆ. ಇದರ ಜತೆಗೆ, ದೇಶಿ ಮಾರುಕಟ್ಟೆಗೆ ಮಾರಾಟ ಮಾಡುವುದರ ಮೇಲೆ ಸಕ್ಕರೆ ಕಾರ್ಖಾನೆಗಳಿಗೆ ಎರಡು ತಿಂಗಳವರೆಗೆ ಪ್ರಮಾಣ ಮಿತಿ ವಿಧಿಸಿದೆ.

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗುತ್ತಿರುವುದರಿಂದ ಆಮದು ಸುಂಕ ಹೆಚ್ಚಿಸಲು ಮತ್ತು ರಫ್ತು ಸುಂಕ ರದ್ದುಪಡಿಸಲು ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟ ಕೇಂದ್ರವನ್ನು ಒತ್ತಾಯಿಸಿದ್ದವು.

ಪ್ರತಿಕ್ರಿಯಿಸಿ (+)