ಸೋಮವಾರ, ಡಿಸೆಂಬರ್ 9, 2019
25 °C
ದ್ವೈ ವಾರ್ಷಿಕ ವಾಹನ ಮೇಳದ ಆಕರ್ಷಣೆಗಳು...

ಮಾರುಕಟ್ಟೆಗೆ ಯಮಹಾ ‘ವೈಜೆಡ್‌ಎಫ್‌–ಆರ್‌3’ ಬೈಕ್‌

Published:
Updated:
ಮಾರುಕಟ್ಟೆಗೆ ಯಮಹಾ ‘ವೈಜೆಡ್‌ಎಫ್‌–ಆರ್‌3’ ಬೈಕ್‌

ಗ್ರೇಟರ್‌ ನೋಯಿಡಾ: ಇಂಡಿಯಾ ಯಮಹಾ ಮೋಟರ್‌ ಕಂಪನಿಯು ‘ವೈಜೆಡ್‌ಎಫ್‌–ಆರ್‌3’ ಸ್ಪೋರ್ಟ್ಸ್ ಬೈಕ್‌ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 3.48 ಲಕ್ಷ ಇದೆ. ಪ್ರಚಾರ ರಾಯಭಾರಿ ಬಾಲಿವುಡ್‌ ನಟ ಜಾನ್‌ ಅಬ್ರಹಾಂ ಅವರ ಉಪಸ್ಥಿತಿಯಲ್ಲಿ ಈ ಬೈಕ್ ಬಿಡುಗಡೆ ಮಾಡಲಾಯಿತು. ಇದು 4 ಸ್ಟ್ರೋಕ್‌, 321 ಸಿಸಿ ಎಂಜಿನ್‌ ಹೊಂದಿದೆ.

‘ಗ್ರಾಹಕರಿಗೆ ಉತ್ತಮ ಮತ್ತು ರೋಚಕ ಸವಾರಿ ಅನುಭವ ಕಟ್ಟಿಕೊಡುವ ಉದ್ದೇಶದಿಂದ ನಮ್ಮ ತಂತ್ರಜ್ಞರ ತಂಡವು ಈ ಸ್ಪೋರ್ಟ್ಸ್‌ ಬೈಕ್‌ನಲ್ಲಿ ಡ್ಯೂಯೆಲ್‌ ಎಬಿಎಸ್‌ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ’ ಎಂದು ಯಮಹಾ ಮೋಟರ್‌ ಇಂಡಿಯಾ ಕಂಪನಿಗಳ ಸಮೂಹದ ಅಧ್ಯಕ್ಷ ಮೊಟೊಫುಮಿ ಶಿತಾರಾ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)