ಬುಧವಾರ, ಡಿಸೆಂಬರ್ 11, 2019
16 °C

ಕೋಲ್‌ ಇಂಡಿಯಾ ಲಾಭ ಹೆಚ್ಚಳ

Published:
Updated:
ಕೋಲ್‌ ಇಂಡಿಯಾ ಲಾಭ ಹೆಚ್ಚಳ

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೋಲ್‌ ಇಂಡಿಯಾ ಲಿಮಿಟೆಡ್‌ (ಸಿಐಎಲ್‌) ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 3,005 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 2,883 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 4.21 ರಷ್ಟು ಹೆಚ್ಚಾಗಿದೆ ಎಂದು ಷೇರುಪೇಟೆಗೆ ತಿಳಿಸಿದೆ.

ಒಟ್ಟು ವರಮಾನವು ₹ 23,064 ಕೋಟಿಗಳಿಂದ ₹ 22,484 ಕೋಟಿಗಳಿಗೆ ಇಳಿಕೆಯಾಗಿದೆ. ಜುಲೈ 1 ರಿಂದ ಜಿಎಸ್‌ಟಿ ಜಾರಿಗೆ ಬಂದಿದೆ. ಹೀಗಾಗಿ ಈ ತ್ರೈಮಾಸಿಕದ ವರಮಾನವನ್ನು ಹಿಂದಿನ ಆರ್ಥಿಕ ವರ್ಷದ ತ್ರೈಮಾಸಿಕದೊಂದಿಗೆ ಹೋಲಿಕೆ ಮಾಡಿಲ್ಲ ಎಂದು ತಿಳಿಸಿದೆ.

ಈ ಅವಧಿಯಲ್ಲಿ ಒಟ್ಟು ವೆಚ್ಚ ₹ 17,874 ಕೋಟಿ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 18,907 ಕೋಟಿ ಇತ್ತು.

ಪ್ರತಿಕ್ರಿಯಿಸಿ (+)