ಯೂಕಿಗೆ ಮಿರಲ್ಲೆಸ್‌ ಎದುರಾಳಿ

7

ಯೂಕಿಗೆ ಮಿರಲ್ಲೆಸ್‌ ಎದುರಾಳಿ

Published:
Updated:
ಯೂಕಿಗೆ ಮಿರಲ್ಲೆಸ್‌ ಎದುರಾಳಿ

ಚೆನ್ನೈ: ಯೂಕಿ ಭಾಂಬ್ರಿ ಸೇರಿದಂತೆ ಭಾರತದ 13 ಸ್ಪರ್ಧಿಗಳು ಸೋಮವಾರ ಇಲ್ಲಿ ಆರಂಭವಾಗಲಿರುವ ಚೆನ್ನೈ ಓಪನ್ ಎಟಿಪಿ ಚಾಲೆಂಜರ್‌ ಟೆನಿಸ್ ಟೂರ್ನಿಯ ಮುಖ್ಯ ಸುತ್ತಿನಲ್ಲಿ ಆಡಲಿದ್ದಾರೆ.

ಎಸ್‌ಡಿಎಟಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಭಾನುವಾರ ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಮೂವರು ಭಾರತದ ಸ್ಪರ್ಧಿಗಳು ಜಯ ದಾಖಲಿಸಿದ್ದಾರೆ.

ಸಿಂಗಲ್ಸ್‌ ವಿಭಾಗದ ಮುಖ್ಯ ಸುತ್ತಿನ ಮೊದಲ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಆಸ್ಟ್ರೇಲಿಯಾದ ಆಟಗಾರ ಜೋರ್ಡನ್‌ ಥಾಮ್ಸನ್‌ ಅವರು ಈಜಿಪ್ಟ್‌ನ ಕರೀಮ್‌ ಮಹಮ್ಮದ್‌ ಮಾಮುನ್ ವಿರುದ್ಧ ಆಡಲಿದ್ದಾರೆ.

ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಅಗ್ರ ರ‍್ಯಾಂಕಿಂಗ್ ಆಟಗಾರ ಯೂಕಿ ಭಾಂಬ್ರಿ ಎರಡನೇ ಶ್ರೇಯಾಂಕದ ಸ್ಪೇನ್‌ನ ಆಟಗಾರ ಬೆರ್ನಬೆ ಜಪಟಾ ಮಿರಲ್ಲೆಸ್ ವಿರುದ್ಧ ಆಡಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 112ನೇ ಸ್ಥಾನದಲ್ಲಿರುವ ಯೂಕಿ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಆಡಿದ್ದರು. ಚೀನಾ ಎದುರಿನ ಡೇವಿಸ್ ಕಪ್‌ ತಂಡ ದಲ್ಲಿಯೂ ಯೂಕಿಗೆ ಸ್ಥಾನ ಸಿಕ್ಕಿದೆ.

ಸ್ಥಳೀಯ ಆಟಗಾರ ಅಭಿನವ್ ಸಂಜೀವ್‌ ಶಣ್ಮುಗಂ, ಅರ್ಜುನ್ ಕಾಡೆ, ಸಿದ್ದಾರ್ಥ್‌ ರಾವತ್ ಕೂಡ ಮುಖ್ಯ ಸುತ್ತು ಪ್ರವೇಶಿಸಿದ್ದಾರೆ. ಎರಡನೇ ಶ್ರೇಯಾಂಕದ ಸರ್ಬಿಯಾದ ಆಟಗಾರ ನಿಕೋಲಾ ಕಾಸಿಕ್ ಅನಾ ರೋಗ್ಯದ ಕಾರಣ ಪಂದ್ಯದಿಂದ ಹಿಂದೆಸರಿದರು. ಇದರಿಂದ ಸಂಜೀವ್‌ ಶಣ್ಮುಗಂ ಅವರಿಗೆ ವಾಕ್‌ಓವರ್ ಲಭಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry