ಕಮಲ್‌ ಪಕ್ಷದ ಉದ್ಘಾಟನೆಗೆ ಕೇಜ್ರಿವಾಲ್

7

ಕಮಲ್‌ ಪಕ್ಷದ ಉದ್ಘಾಟನೆಗೆ ಕೇಜ್ರಿವಾಲ್

Published:
Updated:
ಕಮಲ್‌ ಪಕ್ಷದ ಉದ್ಘಾಟನೆಗೆ ಕೇಜ್ರಿವಾಲ್

ಚೆನ್ನೈ: ಮದುರೆಯಲ್ಲಿ ಬುಧವಾರ (ಫೆ.21) ನಡೆಯಲಿರುವ ನಟ ಕಮಲ ಹಾಸನ್‌ ಅವರ ಹೊಸ ರಾಜಕೀಯ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾಗವಹಿಸಲಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಕಮಲ್‌ ಹಾಸನ್‌ ಅವರು ಹೊಸ ರಾಜಕೀಯ ಪಕ್ಷ ಆರಂಭಿಸುವ ಸುಳಿವು ನೀಡಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಕೇಜ್ರಿವಾಲ್‌, ’ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಇಂಥದ್ದೊಂದು ಹೆಜ್ಜೆ ಅವಶ್ಯಕತೆ ಇದೆ. ಭ್ರಷ್ಟಾಚಾರ ಕಿತ್ತುಹಾಕಲು ಸಮಾನ ಮನಸ್ಕರು ಸೇರಿ ಆಲೋಚನೆ ಮಾಡುವ ಅಗತ್ಯವಿದೆ’ ಎಂದಿದ್ದರು.

ಹೊಸ ಪಕ್ಷದ ಉದ್ಘಾಟನೆಗೆ ಟ್ವಿಟರ್‌ ಮೂಲಕ ಎಲ್ಲರಿಗೂ ಕಮಲ್‌ ಹಾಸನ್‌ ಸ್ವಾಗತ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry