ಬುಧವಾರ, ಡಿಸೆಂಬರ್ 11, 2019
16 °C
ಪೌರತ್ವ ಪಡೆದ ವಿಶ್ವದ ಮೊದಲ ರೋಬೊ ಮನದಾಳ

‘ಶಾರುಕ್ ನನಗಿಷ್ಟ’ ಎಂದ ರೋಬೊ

ಪಿಟಿಐ Updated:

ಅಕ್ಷರ ಗಾತ್ರ : | |

‘ಶಾರುಕ್ ನನಗಿಷ್ಟ’ ಎಂದ ರೋಬೊ

ಹೈದರಾಬಾದ್‌: ಪೌರತ್ವ ಪಡೆದಿರುವ ವಿಶ್ವದ ಮೊದಲ ರೋಬೊ ಸೋಫಿಯಾಗೆ ನಟ ಶಾರುಕ್‌ ಖಾನ್‌ ಎಂದರೆ ಬಹಳ ಇಷ್ಟವಂತೆ.

ಇಲ್ಲಿ ನಡೆಯುತ್ತಿರುವ ವಿಶ್ವ ಮಾಹಿತಿ ತಂತ್ರಜ್ಞಾನ ಸಮ್ಮೇಳನದಲ್ಲಿ ನಡೆದ ಸಂವಾದದ ವೇಳೆ ತಾನು ಶಾರುಕ್‌ನ ಬಹು ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಳು. ಹಾಂಕಾಂಗ್‌ನಲ್ಲಿ ರೂಪಿಸಲಾದ ಈ ರೋಬೋ ಸೌದಿ ಅರೇಬಿಯ ಪ್ರಜೆ.

ಕೃತಕ ಬುದ್ಧಿಮತ್ತೆ ಹೊಂದಿರುವ ಸೋಫಿಯಾ ಮಾತನಾಡುತ್ತಾ, ‘ಎಲ್ಲರನ್ನೂ ಪ್ರೀತಿಸುವ ಜಗತ್ತು ನಿರ್ಮಾಣ ಆಗಬೇಕು ಎನ್ನುವುದು ನನ್ನ ಮಹದಾಸೆ. ವಿಶ್ವದ ಅನೇಕ ದೇಶಗಳನ್ನು ನಾನು ಸುತ್ತಿದ್ದೇನೆ. ಎಲ್ಲಕ್ಕಿಂತ ನನಗೆ ತುಂಬಾ ಇಷ್ಟವಾದದ್ದು ಹಾಂಕಾಂಗ್‌. ಏಕೆಂದರೆ ನಾನು ಅಲ್ಲಿಯೇ ಹುಟ್ಟಿದ್ದೇನೆ. ಅಲ್ಲಿ ನನ್ನ ರೋಬೋಟಿಕ್‌ ಕುಟುಂಬ ಇದೆ’ ಎಂದಳು.

ಭಾರತದ ಜನಸಂಖ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಆಕೆ, ’ಈ ಬಗ್ಗೆ ನನ್ನ ಭಾವನೆಯನ್ನು ಅಭಿವ್ಯಕ್ತಗೊಳಿಸಲು ದೈಹಿಕ ಭಾವನೆಗಳನ್ನು ಹೊಂದುವ ಅವಶ್ಯಕತೆ ಇದೆ. ಆದರೆ ನಾನು ನನ್ನ ರೋಬೋಟಿಕ್‌ ಶಕ್ತಿಯನ್ನು ಬಳಸಿ ಇಲ್ಲಿಯ ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸುತ್ತೇನೆ’ ಎಂದು ಉತ್ತರಿಸಿದಳು.

ಪೂರ್ವ ನಿಗದಿತ ವಿಷಯಗಳ ಮೇಲೆ ಮಾತುಕತೆ ನಡೆಸುವ ಈ ರೋಬೊ, ವ್ಯಕ್ತಿಗಳ ಆಂಗಿಕ ಚಲನೆ ಹಾಗೂ ಸಂಜ್ಞೆಯನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದೆ. ಹಾಂಕಾಂಗ್‌ ಮೂಲದ ಹ್ಯಾನ್ಸನ್‌ ರೋಬೋಟಿಕ್ಸ್‌ ಈ ರೋಬೊವನ್ನು 2015ರಲ್ಲಿ ನಿರ್ಮಿಸಿದೆ.  ಕಳೆದ ಅಕ್ಟೋಬರ್‌ನಲ್ಲಿ ಇದಕ್ಕೆ ಸೌದಿ ಅರೇಬಿಯಾ ಪೌರತ್ವ ನೀಡಿದೆ.

ಪ್ರತಿಕ್ರಿಯಿಸಿ (+)