ಸೋಮವಾರ, ಡಿಸೆಂಬರ್ 9, 2019
25 °C

ರಿಯಾಲಿಟಿ ಶೋದಲ್ಲಿ ಬಾಲಕಿಗೆ ಮುತ್ತಿಟ್ಟ ಪಪೊನ್‌: ದೂರು ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

ರಿಯಾಲಿಟಿ ಶೋದಲ್ಲಿ ಬಾಲಕಿಗೆ ಮುತ್ತಿಟ್ಟ ಪಪೊನ್‌: ದೂರು ದಾಖಲು

ಮುಂಬೈ : ರಿಯಾಲಿಟಿ ಶೋದಲ್ಲಿ  ಬಾಲಕಿಯೊಬ್ಬಳಿಗೆ ಗಾಯಕ ಅನುರಾಗ್‌ ಪಪೊನ್‌ ಮುತ್ತು ನೀಡಿರುವುದು ಫೇಸ್‌ಬುಕ್‌ ನೇರ ಪ್ರಸಾರದಲ್ಲಿ ದಾಖಲಾಗಿದೆ.

‘ವಾಯ್ಸ್ ಇಂಡಿಯಾ ಕಿಡ್ಸ್‘ ರಿಯಾಲಿಟಿ ಶೋನಲ್ಲಿ ಹೋಳಿ ಹಬ್ಬದ ಆಚರಣೆ ನಡೆಯುತ್ತಿತ್ತು. ಆ ವೇಳೆ ಸ್ಪರ್ಧಿಗಳೆಲ್ಲ ಬಣ್ಣ ಮೆತ್ತಿ ಸಂಭ್ರಮಿಸುತ್ತಿದ್ದಾಗ ತೀರ್ಪುಗಾರರಲ್ಲಿ ಒಬ್ಬರಾದ ಪಪೋನ್, ಸ್ಪರ್ಧಿಯಾಗಿರುವ ಬಾಲಕಿಯ ಮುಖಕ್ಕೆ ಬಣ್ಣ ಮೆತ್ತಿ, ಆಕೆಯ ಅನುಮತಿ ಇಲ್ಲದೇ ತುಟಿಗೆ ಮುತ್ತು ಕೊಟ್ಟಿದ್ದಾರೆ.

ಪಪೊನ್‌ ವಿರುದ್ಧ ಸುಪ್ರೀಂಕೋರ್ಟ್‌ ವಕೀಲೆ ರುನಾ ಭುಯಾನ್‌ ಅವರು ದೂರು ನೀಡಿದ್ದು, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ (ಪೋಸ್ಕೋ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಚಾರವನ್ನು ದೊಡ್ಡದು ಮಾಡದಂತೆ ಮಾಧ್ಯಮಗಳಿಗೆ ಬಾಲಕಿ ತಂದೆ ಮನವಿ ಮಾಡಿದ್ದಾರೆ. ‘ಅನುರಾಗ್‌ ಅವರು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಲ್ಲ. ಅವರೂ ನನ್ನ ಮಗಳ ಪಾಲಿಗೆ ತಂದೆಯಂತೆಯೇ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)