ಭಿನ್ನ ಪ್ರೀತಿಯ ಟಿಸಿಲು

7

ಭಿನ್ನ ಪ್ರೀತಿಯ ಟಿಸಿಲು

Published:
Updated:
ಭಿನ್ನ ಪ್ರೀತಿಯ ಟಿಸಿಲು

ದ ಕೇಕ್ ಮೇಕರ್

ಸಲಿಂಗಕಾಮಿಯೊಬ್ಬನ ಪ್ರೇಮಕಥೆ ‘ದ ಕೇಕ್ ಮೇಕರ್’. ಬರ್ಲಿನ್‌ನಿಂದ ಜೆರುಸಲೇಂಗೆ ತನ್ನ ಪ್ರೇಮವನ್ನು ಅರಸಿ ಬರುವ ವ್ಯಕ್ತಿ ಥಾಮಸ್. ತನ್ನ ಪ್ರೇಮಿ ಅಪಘಾತದಲ್ಲಿ ಮೃತಪಟ್ಟಿರುತ್ತಾನೆ. ಆತನ ನೆನಪಿನಲ್ಲಿ ಅವನಿದ್ದ ಜೆರುಸಲೇಂ ನಗರಕ್ಕೆ ಪ್ರಯಾಣ ಮಾಡುತ್ತಾನೆ. ದಾರಿಯುದ್ದಕ್ಕೂ ಆತ ಪ್ರೇಮ ಪ್ರಲಾಪ, ಹಳಹಳಿಕೆ, ಪ್ರೀತಿಯ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತದೆ. ಇದು ಇಂದಿಗೆ ಪ್ರಸ್ತುತವಾಗುವುದೇ ಇಂಥ ಭಿನ್ನ ಪ್ರೇಮ ಪ್ರಲಾಪಗಳಿಂದ. ಆದರೆ ಜೆರುಸಲೇಂ ನಗರದಲ್ಲಿ ಆತ ಸಲಿಂಗಕಾಮಿಯ ಪತ್ನಿಯನ್ನು ಭೇಟಿಯಾಗುತ್ತಾನೆ. ಆಕೆ ನಡೆಸುತ್ತಿದ್ದ ಕೆಫೆಯಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅವಳೊಂದಿಗೆ ದಿನ ಕಳೆಯುತ್ತಿದ್ದಂತೆ ಆಕೆ ಮೇಲೆ ಮೋಹಗೊಳ್ಳುತ್ತಾನೆ. ಸಲಿಂಗಿಯಾದವ ಹೆಣ್ಣಿಗೂ ಆಕರ್ಷಿತನಾಗುವ ಬಗೆ ಹೂವರಳಿಸಿದಂತೆ ನವಿರಾಗಿ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಅಂತಿಮವಾಗಿ ತನ್ನ ಪತಿಯೊಬ್ಬ ಸಲಿಂಗಕಾಮಿ, ಹಾಗೇ ಈಗ ನಾನು ಪ್ರೀತಿಸುತ್ತಿರುವವನೇ ನನ್ನ ಪತಿಯ ಪ್ರೇಮಿ ಎಂದು ಆಕೆಗೆ ತಿಳಿಯುತ್ತದೆ. ಭಾವಗಳ ತೊಳಲಾಟವು ನವಿರು ಬಣ್ಣದಾಟವಾಗಿ ಪರದೆಯ ಮೇಲೆ ಮೂಡಿಬಂದಿದೆ.

ನಿ–ಆಫ್ರಿ ರಾಲ್ ಗ್ರೇಸರ್, ಪರದೆ–5 ಬೆಳಿಗ್ಗೆ 12.10

***

ಮರ್ಲೀನಾ– ದ ಮರ್ಡರರ್ ಇನ್ ಫೋರ್‌ ಆ್ಯಕ್ಟ್ಸ್‌

ಮಹಿಳಾ ಚಿಂತನೆಗಳ ಪುನರ್ ಓದು ಈ ಸಿನಿಮಾ. ವಾಸ್ತವವನ್ನು ಬದಿಗಿಟ್ಟು ನೋಡಿದರೆ, ‘ಹೀಗೂ ನ್ಯಾಯ ಕೇಳಬೇಕು. ಬದುಕನ್ನು ದಿಟ್ಟತನದಿಂದ ಎದುರಿಸಬೇಕು’ ಎಂಬ ಸಂದೇಶ ನೀಡುತ್ತಾ ವಿಭಿನ್ನ ಕಥಾ ಹಂದರವನ್ನು ನೋಡುಗರ ಮುಂದೆ ತೆರೆದಿಡುತ್ತದೆ. ಇಂಡೊನೇಷ್ಯಾದ ಅತ್ಯಂತ ಹಿಂದುಳಿದ ಪ್ರದೇಶದ ವಿಧವೆಯ ಬದುಕು‌ ಮತ್ತು ಆಕೆಯ ಮೇಲೆ ನಿರಂತರವಾಗಿ ನಡೆಯುವ ದೌರ್ಜನ್ಯವನ್ನು ನಿರ್ದೇಶಕ ಪ್ರಯೋಗಾತ್ಮಕ ಚಿತ್ರಕಥೆಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಒಂಟಿ ಹೆಣ್ಣು ಮಗಳ ಮೇಲೆ ದಾಳಿ ಮಾಡುವ 7 ಜನ ಕಳ್ಳರು, ಆಕೆಯ ಮೇಲೆ ಅತ್ಯಾಚಾರ ಮಾಡಿ, ದನವನ್ನೂ ಕದ್ದು ಹೋಗುತ್ತಾರೆ. ದೌರ್ಜನ್ಯ ಸಹಿಸಿಕೊಂಡು ಸುಮ್ಮನಾಗದೆ, ಕಳ್ಳರನ್ನು ಜಾಣ್ಮೆಯಿಂದ ಕೊಲ್ಲುತ್ತಾಳೆ. ಪೊಲೀಸು, ಕೋರ್ಟು ಕಚೇರಿ ಅಲೆಯುತ್ತಾ ನ್ಯಾಯಕ್ಕಾಗಿ ಹೋರಾಡುತ್ತಾಳೆ. ಅವಳ ಸಾಹಸ ಕಥೆಯೇ ಸಿನಿಮಾದ ತಿರುಳು.

ನಿ– ಮೌಲ್ಯ ಸೂರ್ಯ ಪರದೆ–7 ಸಂಜೆ 7.40

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry