ಗುರುಪರಂಪರಾ ವಿದ್ಯಾಲಯದಲ್ಲಿ ಸಂಸ್ಕೃತಿ ಉತ್ಸವ

7

ಗುರುಪರಂಪರಾ ವಿದ್ಯಾಲಯದಲ್ಲಿ ಸಂಸ್ಕೃತಿ ಉತ್ಸವ

Published:
Updated:
ಗುರುಪರಂಪರಾ ವಿದ್ಯಾಲಯದಲ್ಲಿ ಸಂಸ್ಕೃತಿ ಉತ್ಸವ

ನೆಲಮಂಗಲ: ದಾಸನಪುರದ ವೈಷ್ಣವ ಸಭಾದ ಆಚಾರ್ಯ ಗುರುಪರಂಪರಾ ವಿದ್ಯಾಲಯದಲ್ಲಿ ‘ಸಂಸ್ಕೃತಿ ಉತ್ಸವ’ ನಡೆಯಿತು.

ಮಣ್ಣಿನ ವಾಸನೆ ಗೊತ್ತಿಲ್ಲದ ಮಕ್ಕಳಿಗೆ ಪ್ರಕೃತಿಯ ಪರಿಚಯ ಮಾಡಿಕೊಡಬೇಕು. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ಕಲಿಸಬೇಕು. ಸ್ವತಂತ್ರವಾಗಿ ಹಾರಲು ಬಿಡಬೇಕು ಎಂದು ಶಿವಮೊಗ್ಗದ ಪ್ರಗತಿಪರ ರೈತ ಮಂಜಪ್ಪ ಸಲಹೆ ನೀಡಿದರು.

ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌ ಜಿ.ಎನ್‌.ರಾಮದಾಸ್‌, ‘ವೃತ್ತಿ ನಿಷ್ಠೆ ಮತ್ತು ಕಠಿಣ ಪರಿಶ್ರಮ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ’ ಎಂದು ತಿಳಿಸಿದರು.

ಕನಕದಾಸ, ನಾಟ್ಯರಾಣಿ ಶಾಂತಲೆಗೆ ಸಂಬಂಧಿಸಿದ ನಾಟಕ, ಒನಕೆ ಓಬವ್ವಳ ನೃತ್ಯರೂಪಕ, ದೇಶಾಭಿಮಾನ ಮೂಡಿಸುವ, ರೈತರು ಹಾಗೂ ಸೈನಿಕರಿಗೆ ಗೌರವ ಸಲ್ಲಿಸುವ ನೃತ್ಯ, ಯೋಗ ಪ್ರದರ್ಶನ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry