ಏಸುಕ್ರಿಸ್ತ ಕುರಿತು ಗಾಂಧೀಜಿ ಬರೆದ ಪತ್ರ ₹32 ಲಕ್ಷಕ್ಕೆ?

7

ಏಸುಕ್ರಿಸ್ತ ಕುರಿತು ಗಾಂಧೀಜಿ ಬರೆದ ಪತ್ರ ₹32 ಲಕ್ಷಕ್ಕೆ?

Published:
Updated:
ಏಸುಕ್ರಿಸ್ತ ಕುರಿತು ಗಾಂಧೀಜಿ ಬರೆದ ಪತ್ರ ₹32 ಲಕ್ಷಕ್ಕೆ?

ವಾಷಿಂಗ್ಟನ್‌: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಏಸುಕ್ರಿಸ್ತನ ಅಸ್ತಿತ್ವದ ಕುರಿತು ಚರ್ಚಿಸಿ, ಪರಿಣಾಮಕಾರಿಯಾಗಿ ಮತ್ತು ಭಾವನಾತ್ಮಕವಾಗಿ ಬರೆದ ಪತ್ರವೊಂದು ಅಮೆರಿಕದಲ್ಲಿ ₹32.61 ಲಕ್ಷಕ್ಕೆ ಮಾರಾಟಕ್ಕಿದೆ.

1926ರ ಏಪ್ರಿಲ್‌ 6ರಂದು ಗುಜರಾತಿನ ಸಾಬರಮತಿ ಆಶ್ರಮದಲ್ಲಿ ಗಾಂಧೀಜಿ ಈ ಪತ್ರ ಬರೆದಿದ್ದರು.

ಮಸುಕಾದ ಮಸಿ ಬಳಸಿ ಈ ಪತ್ರ ಟೈಪ್ ಮಾಡಿದ್ದು, ಇದರ ಮೇಲೆ ಗಾಂಧೀಜಿ ಅವರ ಸಹಿ ಇದೆ. ಇದುವರೆಗೂ ಖಾಸಗಿ ಸಂಗ್ರಹದಲ್ಲಿದ್ದ ಈ ಪತ್ರವನ್ನು, ಈಗ ಪೆನ್ಸಿಲ್ವೇನಿಯಾದ ರಾಬ್ ಕಲೆಕ್ಷನ್ ಸಂಸ್ಥೆಯು ಮಾರಾಟಕ್ಕೆ ಇಟ್ಟಿದೆ.

ಅಮೆರಿಕದ ಮಿಲ್ಟನ್‌ ನ್ಯೂಬೆರ್ರಿ ಫ್ರಾಂಟ್ಜ್‌ ಅವರಿಗೆ ಈ ಪತ್ರ ಬರೆಯಲಾಗಿದೆ. ಅದರಲ್ಲಿ ‘ಏಸು ಈ ಭೂಮಿಯ ಮೇಲೆ ಇದ್ದ ಮಾನವೀಯತೆಯ ಅತ್ಯದ್ಭುತ ಶಿಕ್ಷಕ’ ಎಂದು ವರ್ಣಿಸಿದ್ದಾರೆ.

‘ಏಸು ಬಗ್ಗೆ ಗಾಂಧೀಜಿಗೆ ಇದ್ದ ನಂಬಿಕೆಯು, ತನ್ನ ಸಹಚರರಲ್ಲಿಇರುವ ಸಾಮಾನ್ಯ ಗುಣಗಳನ್ನು ಗುರುತಿಸುವ ಅತಿ ಮುಖ್ಯ ಅಂಶ’ ಎಂದು ರಾಬ್ ಕಲೆಕ್ಷನ್‌ ಸಂಸ್ಥೆಯ ಮುಖ್ಯಸ್ಥ ನೆಥಾನ್‌ ರಾಬ್ ತಿಳಿಸಿದ್ದಾರೆ.

‘ಧರ್ಮದ ಬಗ್ಗೆ ಗಾಂಧೀಜಿ ಬರೆದಿರುವ ಅತ್ಯುತ್ತಮ ಪತ್ರ ಇದು’ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry