ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯ ಅಂತಃಕರಣದ ನುಡಿಗೆ ಸ್ಪಂದಿಸಿ ಉಗ್ರವಾದ ತೊರೆದು ಮನೆಗೆ ಮರಳಿದ ಯುವಕ

Last Updated 2 ಮಾರ್ಚ್ 2018, 11:21 IST
ಅಕ್ಷರ ಗಾತ್ರ

ಜಮ್ಮು: ಕಾಶ್ಮೀರದಲ್ಲಿ ಉಗ್ರಪಡೆಯನ್ನು ಸೇರಿದ್ದ ಯುವಕನೊಬ್ಬ ತಾಯಿಯ ವಾತ್ಸಲ್ಯದ ಮಾತಿಗೆ ಓಗೊಟ್ಟು ಪುನಃ ತವರಿಗೆ ಮರಳಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೆತ್ತ ಮಗನಿಗಾಗಿ ಕಣ್ಣೀರಿಟ್ಟ ತಾಯಿಯು ತನ್ನ ಮಗನಿಗೆ ಹಿಂಸೆಯ ಹಾದಿಯನ್ನು ತೊರೆದು ಮರಳಿ ಮನೆಗೆ ಬರುವಂತೆ ಮನವಿ ಮಾಡಿದ್ದರು. ತಾಯಿಯ ಅಂತಃಕರಣದ ಮಾತಿಗೆ ಸ್ಪಂದಿಸಿದ ಯುವಕ ಮನೆಗೆ ಬಂದಿದ್ದಾನೆ. ಇದನ್ನು ಕಂಡು ಸಂತೋಷವಾಗುತ್ತಿದೆ ಎಂದು ಡಿಜಿಪಿ ಎಸ್‌.ಪಿ. ವೈದ್ ಅವರು ಟ್ವೀಟ್ ಮಾಡಿದ್ದಾರೆ.

ಆದರೆ, ಮರಳಿದ ಯುವಕನ ವಯಸ್ಸು ಹಾಗೂ ಇನ್ನಿತರ ವಿವರಗಳನ್ನೂ ಎಲ್ಲೂ ಬಹಿರಂಗಗೊಳಿಸಿಲ್ಲ.

2017ರಲ್ಲಿ ನಾಲ್ವರು ಯುವಕರು ಕಾಶ್ಮೀರಿ ಉಗ್ರ ಪಡೆ ಹಾಗೂ ಅಲ್ಲಿನ ಹಿಂಸಾ ಮಾರ್ಗವನ್ನು ತೊರೆದು ತಮ್ಮ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT