ಶೀತಲ ಸಮರದ ಒಪ್ಪಂದ ಉಲ್ಲಂಘಿಸಿದ ರಷ್ಯಾ: ಅಮೆರಿಕ ಆರೋಪ

ಮಂಗಳವಾರ, ಮಾರ್ಚ್ 19, 2019
27 °C

ಶೀತಲ ಸಮರದ ಒಪ್ಪಂದ ಉಲ್ಲಂಘಿಸಿದ ರಷ್ಯಾ: ಅಮೆರಿಕ ಆರೋಪ

Published:
Updated:
ಶೀತಲ ಸಮರದ ಒಪ್ಪಂದ ಉಲ್ಲಂಘಿಸಿದ ರಷ್ಯಾ: ಅಮೆರಿಕ ಆರೋಪ

ವಾಷಿಂಗ್ಟನ್‌: ಶೀತಲ ಸಮರದ ಸಂದರ್ಭದಲ್ಲಿ ಮಾಡಿಕೊಂಡಿದ್ದ ಒಡಂಬಡಿಕೆಗಳನ್ನು ಮೀರಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್‌ ಪುಟಿನ್‌, ಹೊಸ ಮಾದರಿಯ ಶಕ್ತಿಶಾಲಿ ಶಸ್ತ್ರಾಸ್ತಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.

ರಷ್ಯಾ ಹಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದ್ದು, ಅವುಗಳಲ್ಲಿ ಅಣ್ವಸ್ತ್ರ ಆಧಾರಿತ ಯುದ್ಧ ಕ್ಷಿಪಣಿಗಳೂ ಸೇರಿವೆ ಎಂದು ಪುಟಿನ್‌ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅಮೆರಿಕ ಈ ಆರೋಪ ಮಾಡಿದೆ.

‘ರಷ್ಯಾ ಬಗ್ಗೆ ನಮಗಿದ್ದ ಭಾವನೆಯನ್ನು ಅದು ಈಗ ನಿಜ ಮಾಡಿದೆ. ನಮ್ಮ ಅನುಮಾನಗಳನ್ನು ಅಲ್ಲಗಳೆಯುತ್ತಿದ್ದ ರಷ್ಯಾ, ಇದೀಗ ತನ್ನ ವರಸೆ ತೋರಿಸಿದೆ. ಅದು ಕಳೆದ ಹತ್ತು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿದೆ. ರಷ್ಯಾದ ಶಸ್ತ್ರಾಸ್ತ್ರಗಳನ್ನು ಎದುರಿಸುವ ತಾಕತ್ತು ಅಮೆರಿಕದ ಮಿಲಿಟರಿಗೆ ಇದೆ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ತಿಳಿಸಿದ್ದಾರೆ.

‘ಅಮೆರಿಕ ಎದುರಿಸುತ್ತಿರುವ ಬೆದರಿಕೆಗಳನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅರಿತಿದ್ದಾರೆ. ತಾಯ್ನೆಲವನ್ನು ರಕ್ಷಿಸುವ, ಶಾಂತಿ ಕಾಪಾಡಿಕೊಳ್ಳುವ ಸಾಮರ್ಥ್ಯ ಅಮೆರಿಕಕ್ಕೆ ಇದೆ. ನಮ್ಮ ಮಿಲಿಟರಿ ಸಾಮರ್ಥ್ಯ ಅತ್ಯುತ್ತಮವಾದುದು’ ಎಂದು ಸ್ಯಾಂಡರ್ಸ್‌ ಹೇಳಿದ್ದಾರೆ.

ಪುಮರ್ಕೆಲ್‌, ಟ್ರಂಪ್‌ ಮಾತುಕತೆ: ಸಿರಿಯಾದ ಸದ್ಯದ ಪರಿಸ್ಥಿತಿ ಮತ್ತು ಹೊಸ ಶಸ್ತ್ರಾಸ್ತ್ರಗಳ ಅಭಿವೃದ್ಧಿ ಬಗ್ಗೆ ಘೋಷಿಸಿದ ರಷ್ಯಾದ ನಿಲುವು ಕುರಿತು ಜರ್ಮನಿಯ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚರ್ಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry