ಪೇಟೆಯಲ್ಲಿ ಅನಿಶ್ಚಿತತೆ: ಕುಸಿದ ಸಂವೇದಿ ಸೂಚ್ಯಂಕ

7

ಪೇಟೆಯಲ್ಲಿ ಅನಿಶ್ಚಿತತೆ: ಕುಸಿದ ಸಂವೇದಿ ಸೂಚ್ಯಂಕ

Published:
Updated:
ಪೇಟೆಯಲ್ಲಿ ಅನಿಶ್ಚಿತತೆ: ಕುಸಿದ ಸಂವೇದಿ ಸೂಚ್ಯಂಕ

ಮುಂಬೈ: ಕಳೆದ ವಾರ ಏರಿಕೆ ದಾಖಲಿಸಿದ್ದ ಷೇರುಪೇಟೆ ವಹಿವಾಟು, ಈ ವಾರಪೂರ್ತಿ ನೀರಸ ವಹಿವಾಟು ನಡೆದ ಪರಿಣಾಮ ನಷ್ಟ ಅನುಭವಿಸಿದೆ. ಮುಂಬೈ ಷೇರುಪೇಟೆ ಸೂಚ್ಯಂಕವು 95.21 ಅಂಶಗಳನ್ನು ಕಳೆದುಕೊಂಡು 34,046 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ನಿಫ್ಟಿ) ಕೂಡ 32.70 ಅಂಶಗಳನ್ನು ಕಳೆದುಕೊಂಡು 10,458 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಮೂರನೇ ತ್ರೈಮಾಸಿಕದ ಜಿಡಿಪಿ ಹೆಚ್ಚಳವು ಪೇಟೆಯಲ್ಲಿ ಉತ್ಸಾಹ ತುಂಬಿದರೂ ಮಾರಾಟ ಒತ್ತಡಗಳಿಂದ ಮಂದಗತಿಯ ವಹಿವಾಟು ನಡೆಯಿತು.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿದರ ಹೆಚ್ಚಳ ಮಾಡುವ ಸುಳಿವು ನೀಡಿದ್ದರಿಂದ ಹೂಡಿಕೆದಾರರು ಷೇರು ಖರೀದಿಗೆ ಹಿಂದೇಟು ಹಾಕಿದರು. ಇದರಿಂದ ಮಾರುಕಟ್ಟೆ ಓಟಕ್ಕೆ ಕಡಿವಾಣ ಬಿದ್ದಿತು.

ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನ ₹12,700 ಕೋಟಿ ವಂಚನೆ ಪ್ರಕರಣ ಇಡೀ ವಾರ ಮಾರುಕಟ್ಟೆಯನ್ನು ಕಾಡಿತು. ಬ್ಯಾಂಕ್‌ ಷೇರುಗಳ ಮೌಲ್ಯವು ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಂಡಿತು. ಅಲ್ಲದೆ, ಆರೋಗ್ಯ ಸೇವೆ ಮತ್ತು ಲೋಹ ಕ್ಷೇತ್ರಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು.

ವಾರದ ಗರಿಷ್ಠ ಮಟ್ಟವಾದ 34,225 ಅಂಶಗಳೊಂದಿಗೆ ಆರಂಭವಾದ ಷೇರುಪೇಟೆ ವಹಿವಾಟು, ವಾರದ ವಹಿವಾಟಿನ ಒಂದು ಹಂತದಲ್ಲಿ 34,610 ಅಂಶಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry