ಕಾಂಗ್ರೆಸ್‌ ಮುಕ್ತ ಭಾರತ ಸನ್ನಿಹಿತ: ರವಿಶಂಕರ್‌ ಪ್ರಸಾದ್‌

7

ಕಾಂಗ್ರೆಸ್‌ ಮುಕ್ತ ಭಾರತ ಸನ್ನಿಹಿತ: ರವಿಶಂಕರ್‌ ಪ್ರಸಾದ್‌

Published:
Updated:
ಕಾಂಗ್ರೆಸ್‌ ಮುಕ್ತ ಭಾರತ ಸನ್ನಿಹಿತ: ರವಿಶಂಕರ್‌ ಪ್ರಸಾದ್‌

ಪಟ್ನಾ: ಬಿಜೆಪಿ ಕಂಡ ‘ಕಾಂಗ್ರೆಸ್‌ ಮುಕ್ತ ಭಾರತ’ ಕನಸು ಅತ್ಯಂತ ಶೀಘ್ರ ನನಸಾಗುವ ಸಾಧ್ಯತೆ ಇದೆ. ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಇದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಪ್ರತಿಕ್ರಿಯಿಸಿದ್ದಾರೆ.

ಮೂರು ರಾಜ್ಯಗಳ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕಾಂಗ್ರೆಸ್‌ ಮುಕ್ತ ಭಾರತ ಕೇವಲ ಘೋಷಣೆ ಅಲ್ಲ. ಅದು ಸತ್ಯವಾಗುತ್ತಿದೆ. ಎಡ ಪಕ್ಷಗಳು ಈ ದೇಶಕ್ಕೆ ಅಪ್ರಸ್ತುತ ಎಂಬುವುದನ್ನು ತ್ರಿಪುರಾ ಫಲಿತಾಂಶ ಸಾರಿ ಹೇಳಿದೆ. ಇದು ಪಶ್ಚಿಮ ಬಂಗಾಳದ ರಾಜಕೀಯದ ಮೇಲೂ ಪರಿಣಾಮ ಬೀರುತ್ತದೆ’ ಎಂದು ಪ್ರಸಾದ್‌ ವಿಶ್ಲೇಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry