ಭಜನಾ ಕಲೆ ಪ್ರಚಾರಕ ರಾಮಪ್ಪ

ಮಂಗಳವಾರ, ಮಾರ್ಚ್ 19, 2019
27 °C
ಭಜನಾ ಕಲಾವಿದರ ಪಾರಿಜಾತದ ಸತ್ಯಭಾಮ ಪಾತ್ರ ಚಿರಪರಿಚಿತ

ಭಜನಾ ಕಲೆ ಪ್ರಚಾರಕ ರಾಮಪ್ಪ

Published:
Updated:
ಭಜನಾ ಕಲೆ ಪ್ರಚಾರಕ ರಾಮಪ್ಪ

ಬಾದಾಮಿ : ಉತ್ತರ ಕರ್ನಾಟಕದ ಪ್ರಮುಖ ಜಾನಪದ ಕಲೆಗಳಲ್ಲಿ ಭಜನಾ ಕಲೆಯು ಅತ್ಯಂತ ಪ್ರಮುಖ. ನಶಿಸುತ್ತಿರುವ ಇಂತಹ ಜಾನಪದ ಕಲೆಗಳನ್ನು ಉಳಿಸಿ ಬೆಳಸುತ್ತಿರುವ ಅನೇಕ ಕಲಾವಿದರಲ್ಲಿ ಬಾದಾಮಿ ತಾಲ್ಲೂಕಿನ ತೆಗ್ಗಿ ಗ್ರಾಮದ ಹಿರಿಯ ಕಲಾವಿದ ರಾಮಪ್ಪ ಸಕ್ರಪ್ಪ ಕಡಿವಾಲ ಒಬ್ಬರು.

1942ರ ಜೂನ್‌ 1ರಂದು ತಾಲ್ಲೂಕಿನ ತೆಗ್ಗಿ ಗ್ರಾಮದಲ್ಲಿ ಜನಿಸಿದ ಅವರು ಚಿಕ್ಕಂದಿನಿಂದಲೂ ನಾಟಕ–ಪಾರಿಜಾತ ನೋಡಿ ಪ್ರಭಾವಿತರಾದವರು. ಪಾರಿಜಾತ ದಲ್ಲಿ ಸ್ತ್ರೀ ಪಾತ್ರಗಳನ್ನು ಅಭಿನಯಿಸತೊಡಗಿದರು. ಆ ನಾಟಕದಲ್ಲಿ ಅವರು ಸತ್ಯಭಾಮಾ ಪಾತ್ರವನ್ನು ಆಕರ್ಷಕ ರೀತಿಯಲ್ಲಿ ನಟಿಸಿ, ಆ ಪಾತ್ರದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

ನಂತರ ಉದಗಟ್ಟಿಯ ಲಕ್ಷ್ಮಣ ಮಾಸ್ತರ ಇವರ ಮಾರ್ಗದರ್ಶನದಲ್ಲಿ ಹಾರ್ಮೋನಿಯಂ ನುಡಿಸುತ್ತಾ ಗಾಯನ ಕಲಿತರು. ಸ್ವಗ್ರಾಮದ ಕಲಾವಿದರಾದ ಭೀಮಪ್ಪ ಗೌಡ್ರ, ಮಾದೇವಪ್ಪ ಕರಡಿಗುಡ್ಡ, ಶಿವಪ್ಪ ಕರಡಿಗು ಡ್ಡ, ಭೀಮಪ್ಪ ಬಡಿಗೇರ, ನಿಜಯಪ್ಪ ಮಾದರ ಜೊತೆಗೂಡಿ ಶ್ರೀ ಮಾರುತೇಶ್ವರ ಭಜನಾ ಸಂಘ ಕಟ್ಟಿ ಶರಣರ ತತ್ವ ಪದಗಳನ್ನು ರಾಗ,ತಾಳ,ಲಯ ಬದ್ಧವಾಗಿ ಹಾಡತೊಡಗಿದರು.

ಅವರ ಭಜನಾ ತಂಡ ವಲಯ ಮಟ್ಟ, ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ಗೋವಾ ರಾಜ್ಯದ ಪಣಜಿಯಲ್ಲಿ ಭಜನಾ ಸಮ್ಮೇಳನದಲ್ಲಿ ಭಾಗವಹಿಸಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ಪಡೆದಿದೆ.

ಆಕಾಶವಾಣಿ ಧಾರವಾಡ, ದೂರದರ್ಶನ ಕೇಂದ್ರ–ಬೆಂಗಳೂರು, ಗದಗ, ದಾವಣಗೆರೆ, ಬೆಂಗಳೂರು, ಹುಬ್ಬಳ್ಳಿ, ಬಾದಾಮಿ, ಬಾಗಲಕೋಟೆ ಹೀಗೆ ಹಲವಾರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 3600 ಕ್ಕೂ ಹೆಚ್ಚು ಜಾನಪದ (ಭಜನಾ) ಕಾರ್ಯಕ್ರಮಗಳನ್ನು ಮತ್ತು 1000ಕ್ಕೂ ಹೆಚ್ಚು ಪಾರಿಜಾತದಲ್ಲಿ ಸತ್ಯಭಾಮಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅನೇಕ ಅಸಂಖ್ಯಾತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಉತ್ತರ ಕರ್ನಾಟಕದಲ್ಲಿ ಸೈ ಎನಿಸಿಕೊಂಡಿದ್ದಾರೆ. ರಾಮಪ್ಪ ಕೆಲ ಹಳ್ಳಿಗಳಲ್ಲಿ ನಾಟಕಗಳನ್ನು ಕಲಿಸಿದ್ದಾರೆ. ಸರ್ಕಾರದ ಕಾರ್ಯಕ್ರಮಗಳಾದ ಜನಸಂಖ್ಯೆ, ಜನಜಾಗೃತಿಗಳಲ್ಲಿ ಭಾಗವಹಿಸಿದ್ದಾರೆ. ಅವರ ಸೇವೆಯನ್ನು ಸ್ಮರಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾಸಿವೆ.

2012ರಲ್ಲಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಗ್ರಾಮೀಣ ಭಾಗದಲ್ಲಿ ಈ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಬಹಳ ಶ್ರಮಿಸಿದ್ದಾರೆ. 75 ವಯಸ್ಸಿನಲ್ಲೂ ಅವರ ಉತ್ಸಾಹ ಯುವಕರಿಗೆ ಪ್ರೇರಣೆದಾಯಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry