ಹಿರಿಯ ಸಾಹಿತಿ, ಪ್ರಕಾಶಕ ಶಿವಾನಂದ ಗಾಳಿ ನಿಧನ

ಸೋಮವಾರ, ಮಾರ್ಚ್ 25, 2019
33 °C

ಹಿರಿಯ ಸಾಹಿತಿ, ಪ್ರಕಾಶಕ ಶಿವಾನಂದ ಗಾಳಿ ನಿಧನ

Published:
Updated:
ಹಿರಿಯ ಸಾಹಿತಿ, ಪ್ರಕಾಶಕ ಶಿವಾನಂದ ಗಾಳಿ ನಿಧನ

ಧಾರವಾಡ: ಹಿರಿಯ ಸಾಹಿತಿ ಹಾಗೂ ಪ್ರಕಾಶಕ ಡಾ. ಶಿವಾನಂದ ಗಾಳಿ (73) ಭಾನುವಾರ ತಡರಾತ್ರಿ ಇಲ್ಲಿನ ಶಕ್ತಿನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಇವರಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ನಾಲ್ಕು ಅವಧಿಗೆ ಅಧ್ಯಕ್ಷರಾಗಿದ್ದ ಅವರು, ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ತಮ್ಮ ವಲಯದಲ್ಲಿ ‘ಗಾಳಿ ಶಿವಣ್ಣ’ ಎಂದೇ ಚಿರಪರಿಚಿತರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಪ್ರಸಾರಂಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯರಾಗಿ, ಜೈನ ಅಧ್ಯಯನ ಪೀಠದ ರೂವಾರಿಯೂ ಎನಿಸಿದ್ದರು.

ಸುಂದರ ಪುಸ್ತಕ ಪ್ರಕಾಶನದ ಮೂಲಕ ಅನೇಕ ವಿದ್ವಾಂಸರು ಹಾಗೂ ನಾಡಿನ ಶ್ರೇಷ್ಠ ಸಾಹಿತಿಗಳ ಪುಸ್ತಕಗಳನ್ನು ಹೊರತಂದಿದ್ದರು. ಅಭಿನಂದನಾ ಗ್ರಂಥ ಪ್ರಕಟಿಸುವುದು, ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ಕ್ರಿಯಾಶೀಲರಾಗಿದ್ದರು. ಎಂ.ಎಂ.ಕಲಬುರ್ಗಿ, ಚೆನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ, ಗುರುಲಿಂಗ ಕಾಪಸೆ, ಮಾಲತಿ ಪಟ್ಟಣಶೆಟ್ಟಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಸೋಮಶೇಖರ ಇಮ್ರಾಪುರ, ವೀಣಾ ಶಾಂತೇಶ್ವರ ಸೇರಿದಂತೆ ಅನೇಕರ ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿದ್ದರು.

ಜೈನ ಧರ್ಮದ ವಿಧಿವಿಧಾನಗಳ ಮೂಲಕ ಇಲ್ಲಿನ ರುದ್ರಭೂಮಿಯಲ್ಲಿ ಸೋಮವಾರ ಅಂತ್ಯಕ್ರಿಯೆ ನೆರವೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry