ಅಧಿಕಾರಿಗಳ ವರ್ಗಾವಣೆ ಹಿಂದಕ್ಕೆ

7

ಅಧಿಕಾರಿಗಳ ವರ್ಗಾವಣೆ ಹಿಂದಕ್ಕೆ

Published:
Updated:
ಅಧಿಕಾರಿಗಳ ವರ್ಗಾವಣೆ ಹಿಂದಕ್ಕೆ

ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿ ಐವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ.

ಜನವರಿ 22 ರಂದು ಏಳು ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಈ ವರ್ಗಾವಣೆ ಬಗ್ಗೆ ಮುಖ್ಯ ಚುನಾವಣಾಧಿಕಾರಿಯವರು ಅಸಮಾಧಾನ ವ್ಯಕ್ತಪಡಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಇದೀಗ ವರ್ಗಾವಣೆ ಆದೇಶವನ್ನು ಪರಿಷ್ಕರಿಸಿರುವ ಸರ್ಕಾರ, ಎಂ.ವಿ.ಜಯಂತಿ ಮತ್ತು ವಿ.ಚೈತ್ರಾ ಅವರನ್ನು ಮಾತ್ರ ವರ್ಗಾವಣೆ ಮಾಡಿದೆ. ಉಳಿದ ಅಧಿಕಾರಿಗಳಾದ ಎಸ್.ಬಿ.ಶೆಟ್ಟಣ್ಣ ನವರ್, ಎಂ.ವಿ.ವೆಂಕಟೇಶ್, ಕೆ.ರಾಜೇಂದ್ರ ಮತ್ತು ಬಿ.ಆರ್‌. ಮಮತಾ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry