ಶೌಚಾಲಯ ಶುಚಿಗೊಳಿಸಿಕೊಂಡ ಸಾರ್ವಜನಿಕರು

7

ಶೌಚಾಲಯ ಶುಚಿಗೊಳಿಸಿಕೊಂಡ ಸಾರ್ವಜನಿಕರು

Published:
Updated:

ಕಾರವಾರ: ಪಾಳು ಬಿದ್ದಿದ್ದ ನಗರದ ಬೈತಖೋಲ್ ವಾರ್ಡಿನ ಸಾರ್ವಜನಿಕ ಶೌಚಾಲಯಕ್ಕೆ ಮಂಗಳವಾರ ಸಾರ್ವಜನಿಕರೇ ತಮ್ಮ ಸ್ವಂತ ಖರ್ಚಿನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿಕೊಂಡು, ಶುಚಿಗೊಳಿಸಿಕೊಂಡಿದ್ದಾರೆ.

ಶೌಚಾಲಯದ ಛೇಂಬರ್ ಒಡೆದು ಕಳೆದ ೬ ತಿಂಗಳಿನಿಂದ ಉಪಯೋಗಕ್ಕೆ ಬಾರದೇ ಅದು ಪಾಳು ಬಿದ್ದಿತ್ತು. ಈ ಬಗ್ಗೆ ನಗರಸಭೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನಕ್ಕೆ ಬಂದಿರಲಿಲ್ಲ. ಬಳಿಕ ವಾರ್ಡ್ ಸದಸ್ಯ ಪ್ರಶಾಂತ ಹರಿಕಂತ್ರ ಅವರು ಇತ್ತೀಚಿಗೆ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿತ್ತು.

ಇದಾದ ನಂತರ ಕೆಲವೇ ದಿನಗಳಲ್ಲಿ ನಗರಸಭೆಯ ಅಧ್ಯಕ್ಷ, ಪೌರಾಯುಕ್ತ ಹಾಗೂ ಇತರೆ ಕೆಲ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಶೌಚಾಲಯದ ಛೇಂಬರ್‌ ದುರಸ್ತಿ ಮಾಡಿಸಿಕೊಟ್ಟಿದ್ದರು. ಬಳಿಕ ಸಾರ್ವಜನಿಕರೇ ಮತ್ತೆ ಅಧಿಕಾರಿಗಳಿಗಾಗಿ ಕಾಯದೇ, ತಾವೇ ನೀರಿನ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ವಾರ್ಡ್ ಸದಸ್ಯ ಪ್ರಶಾಂತ ಹರಿಕಂತ್ರ ಸೇರಿದಂತೆ ಅನೇಕರು ಶೌಚಾಲಯ ಶುಚಿಗೊಳಿಸಿ, ಉಪಯೋಗಕ್ಕೆ ಯೋಗ್ಯವಾಗಿರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry