ಓಡಿದ ನಂತರ ಹೀಗೆ ಮಾಡಿ

ಗುರುವಾರ , ಮಾರ್ಚ್ 21, 2019
30 °C

ಓಡಿದ ನಂತರ ಹೀಗೆ ಮಾಡಿ

Published:
Updated:
ಓಡಿದ ನಂತರ ಹೀಗೆ ಮಾಡಿ

* ಸೋಮಾರಿತನ ಬಿಡಿ: ದೈಹಿಕ ಶಕ್ತಿಗಾಗಿ ಓಡುವವರು ಸುಸ್ತಾಯಿತೆಂದು ಗಂಟೆಗಟ್ಟಲೆ ಒಂದೆಡೆ ಕೂರಬಾರದು. ಇದರಿಂದ ಸ್ನಾಯುಗಳಿಗೆ, ನರಗಳಿಗೆ ಶಕ್ತಿ ಬರುವುದಿಲ್ಲ. ಬದಲಾಗಿ ಮೈ, ಕೈ ನೋವು ಹೆಚ್ಚುತ್ತದೆ. ಓಡಿದ ನಂತರ ಲಘು ವ್ಯಾಯಾಮ ಮಾಡಿ. ಇಲ್ಲವೇ ಮನೆಗೆ ಬಂದ ನಂತರ ಚಿಕ್ಕ, ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಇದರಿಂದ ದೇಹ ಚೇತರಿಸಿಕೊಳ್ಳಲು ನೆರವಾಗುತ್ತದೆ.

* ಬಟ್ಟೆ ಬದಲಿಸಿ: ಓಟದಿಂದ ಮೈ ಬೆವರುತ್ತದೆ. ಹಾಗಾಗಿ ಮನೆಗೆ ಬಂದ ತಕ್ಷಣ ಬಟ್ಟೆ ಬದಲಿಸುವುದು ಅವಶ್ಯ. ಇಲ್ಲದಿದ್ದರೆ ಬ್ಯಾಕ್ಟೀರಿಯಾಗಳಿಂದ ಚರ್ಮದ ಸಮಸ್ಯೆಗಳು ಬರಬಹುದು. ಬಟ್ಟೆ ಹಸಿಯಾಗಿರುವ ಕಾರಣ ಶೀತವೂ ಆಗಬಹುದು. ಶೂ, ಸಾಕ್ಸ್‌ಗಳನ್ನು ಎರಡು ದಿನಕ್ಕೊಮ್ಮೆ ತೊಳೆಯಿರಿ.

* ತಿನ್ನುವುದಕ್ಕಿರಲಿ ನಿಯಮ: ಓಡುವುದರಿಂದ ಕ್ಯಾಲೊರಿ ಕಡಿಮೆಯಾಗುತ್ತದೆ. ಇದರಿಂದ ಹಸಿವು ಹೆಚ್ಚುತ್ತದೆ. ಹಾಗೆಂದು ಸಿಕ್ಕಿದ್ದನ್ನೆಲ್ಲ ತಿನ್ನಬೇಡಿ. ಇದರಿಂದ ನಿಮ್ಮ ಓಟದ ಪ್ರಭಾವ ಪರಿಣಾಮ ಬೀರುವುದಿಲ್ಲ. ಆರೋಗ್ಯಕರವಾದ ದೇಹಕ್ಕೆ ಪುಷ್ಟಿ ನೀಡುವಂತಹ ಆಹಾರನ್ನು ತಿನ್ನಿ. ಮೂರು ಬಾರಿ ತಿನ್ನುವ ಆಹಾರವನ್ನು ಐದು ಬಾರಿಗೆ ವಿಭಾಗಿಸಿಕೊಳ್ಳಿ. ತೀರಾ ಹಸಿವಾದಾಗ ಮೊಳಕೆ ಕಾಳು, ಹಣ್ಣುಗಳು, ಜ್ಯೂಸ್‌ಗಳನ್ನು ಸೇವಿಸಿ. ಕುರಕಲು ತಿಂಡಿಗಳಿಂದ (ಜಂಕ್ ಫುಡ್) ದೂರವಿರಿ. ಈ ಬಗೆಯ ಆಹಾರ ನಿಮ್ಮ ದೈಹಿಕ ಸಾಮರ್ಥ್ಯವನ್ನು ಮಂಕಾಗಿಸಬಹುದು.

* ಭಾರವಾದ ವಸ್ತು ಎತ್ತದಿರಿ: ಓಡಿ ಮನೆಗೆ ಬಂದಾಗ ಸುಸ್ತಾಗಿರುತ್ತದೆ. ಆಗ ಚಿಕ್ಕಪುಟ್ಟ ಕೆಲಸಗಳನ್ನು ಮಾಡಬೇಕು. ತುಂಬಾ ಭಾರವಾದ ವಸ್ತುಗಳನ್ನು ಎತ್ತುವುದರಿಂದ ಸ್ನಾಯುಗಳಿಗೆ ಪೆಟ್ಟಾಗಬಹುದು.

* ನೀರು ಕುಡಿಯಿರಿ: ವ್ಯಾಯಾಮ ಮಾಡಿದ ನಂತರ ನೀರು ಕುಡಿಯುವುದು ಅಗತ್ಯ. ನಿಮ್ಮ ಓಟ ಮುಗಿದ ತಕ್ಷಣ ಒಂದು ಲೋಟ ನೀರು ಕುಡಿಯಿರಿ. ಇದು ದೇಹವನ್ನು ಹೈಡ್ರೇಟ್‌ ಮಾಡುತ್ತದೆ. ದೇಹದಲ್ಲಿನ ಕಲ್ಮಶಗಳು ಹೊರಗೆ ಹೋಗಲು ನೆರವಾಗುತ್ತದೆ.

* ತಿಂಡಿ ತಿನ್ನಲು ಮರೆಯದಿರಿ: ಓಡುವುದರಿಂದ ದೇಹ ದಣಿದಿರುತ್ತದೆ. ಬೆಳಿಗ್ಗಿನ ಪ್ರಾರಂಭ ಚೆನ್ನಾಗಿದ್ದರೆ ದಿನ ಪೂರ್ತಿ ಉಲ್ಲಾಸದಿಂದಿರಬಹುದು. ಹಾಗಾಗಿ ಬೆಳಿಗ್ಗೆ ತಿಂಡಿ ತಿನ್ನಲು ಮರೆಯದಿರಿ. ಹೊಟ್ಟೆ ತುಂಬಾ ತಿಂದು ದಿನದ ಕೆಲಸಕ್ಕೆ ಅಣಿಯಾಗಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry