‘ವಾಗ್ದಾನ ಈಡೇರಿಸಿದ ಬಳಿಕವೇ ಮಾತುಕತೆ’

ಬುಧವಾರ, ಮಾರ್ಚ್ 27, 2019
22 °C
ಡೊನಾಲ್ಡ್‌ ಟ್ರಂಪ್‌–ಕಿಮ್‌ ಜಾಂಗ್‌ ಭೇಟಿ ವಿಚಾರ; ಶ್ವೇತಭವನದಿಂದ ಸ್ಪಷ್ಟನೆ

‘ವಾಗ್ದಾನ ಈಡೇರಿಸಿದ ಬಳಿಕವೇ ಮಾತುಕತೆ’

Published:
Updated:
‘ವಾಗ್ದಾನ ಈಡೇರಿಸಿದ ಬಳಿಕವೇ ಮಾತುಕತೆ’

ವಾಷಿಂಗ್ಟನ್‌ : ಉತ್ತರ ಕೊರಿಯಾವು ನೀಡಿರುವ ವಾಗ್ದಾನದಂತೆ, ನಿರ್ದಿಷ್ಟ ವಿಚಾರಗಳು ಕಾರ್ಯರೂಪಕ್ಕೆ ಬಂದ ಬಳಿಕವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ನಡುವೆ ಮಾತುಕತೆ ನಡೆಯಲಿದೆ.

ಮೇ ತಿಂಗಳ ಅಂತ್ಯದಲ್ಲಿ ಉಭಯ ನಾಯಕರು ಭೇಟಿಯಾಗಲಿದ್ದಾರೆ ಎಂದು ಶುಕ್ರವಾರ ಅಮೆರಿಕ ತಿಳಿಸಿತ್ತು. ಆದರೆ ದಿನಾಂಕ ಹಾಗೂ ಸ್ಥಳದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರ ಬೆನ್ನಲ್ಲೇ, ಭೇಟಿಗೆ ಸಂಬಂಧಿಸಿದಂತೆ ಶ್ವೇತಭವನ ಸ್ಪಷ್ಟನೆ ನೀಡಿದೆ.

‘ಅಣ್ವಸ್ತ್ರ ಕೊನೆಗೊಳಿಸುವ ಕುರಿತು, ಪ್ಯೊಂಗ್‌ಯ್ಯಾಂಗ್‌ ಮೇಲೆ ‘ಗರಿಷ್ಠ ಒತ್ತಡ’ ಹೇರುವ ನಿಟ್ಟಿನಲ್ಲಿ ಟ್ರಂಪ್‌ ಆಡಳಿತ ಅಭಿಯಾನ ಮುಂದುವರಿಸಲಿದೆ. ಉತ್ತರ ಕೊರಿಯಾವು ನೀಡಿರುವ ವಾಗ್ದಾನ ಈಡೇರಿಸಿದ ಬಳಿಕವೇ, ಉಭಯ ನಾಯಕರು ಭೇಟಿಯಾಗಲಿದ್ದಾರೆ’ ಎಂದು ಅದು ಹೇಳಿದೆ.

ಉತ್ತರ ಕೊರಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಂಪ್‌, ಶುಕ್ರವಾರ ಹಾಗೂ ಶನಿವಾರ ಜಗತ್ತಿನ ಪ್ರಮುಖ ನಾಯಕರ ಜೊತೆ ದೂರವಾಣಿ ಸಂಭಾಷಣೆ ನಡೆಸಿದರು.

ಒಪ್ಪಂದ ಯಶಸ್ವಿಯಾದರೆ ಜಗತ್ತಿಗೆ ಒಳಿತು: ಟ್ರಂಪ್

ವಾಷಿಂಗ್ಟನ್‌: ಉತ್ತರ ಕೊರಿಯಾ ಜೊತೆಗಿನ ಒಪ್ಪಂದ ಯಶಸ್ವಿಯಾದರೆ, ಇಡೀ ಜಗತ್ತಿಗೆ ಒಳ್ಳೆಯದಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

‘ಜಗತ್ತಿಗೆ ಎದುರಾಗಿರುವ ಅತ್ಯಂತ ಗಂಭೀರ ಹಾಗೂ ಕ್ಲೇಶಕರ ಸ್ಥಿತಿ ಶಮನಗೊಳಿಸಲು ಟ್ರಂಪ್‌ ಅವರೇ ಖುದ್ದು ಆಸಕ್ತಿ ವಹಿಸಿದ್ದಾರೆ’ ಎಂದು ದಿ ವಾಷಿಂಗ್ಟನ್‌ ಪೋಸ್ಟ್‌ ಬಣ್ಣಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry