ಸೆಲೆಬ್ರಿಟಿಗಳ ‘ಏರ್‌ಪೋರ್ಟ್‌ ಲುಕ್‌’

ಮಂಗಳವಾರ, ಮಾರ್ಚ್ 19, 2019
33 °C

ಸೆಲೆಬ್ರಿಟಿಗಳ ‘ಏರ್‌ಪೋರ್ಟ್‌ ಲುಕ್‌’

Published:
Updated:
ಸೆಲೆಬ್ರಿಟಿಗಳ ‘ಏರ್‌ಪೋರ್ಟ್‌ ಲುಕ್‌’

ಕೈಯಲ್ಲೊಂದು ಬ್ಯಾಗ್‌, ಕಣ್ಣಿಗೆ ತಂಪು ಕನ್ನಡಕ, ಕ್ಯಾಶುವಲ್‌ ವೇರ್‌, ಟಾಕುಟೀಕಾದ ನಡಿಗೆ... ಇದು ಸೆಲೆಬ್ರಿಟಿಗಳು ಸಾಮಾನ್ಯವಾಗಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವ ಶೈಲಿ.

ಏರ್‌ಪೋರ್ಟ್‌ನಿಂದ ಹೊರಗೆ ಬರುತ್ತಿದ್ದಂತೆ ಕ್ಯಾಮೆರಾ ಕಣ್ಣುಗಳು ಇವರನ್ನು ಸೆರೆಹಿಡಿಯಲು ಅಣಿಯಾಗುತ್ತವೆ. ಸೆಲೆಬ್ರಿಟಿಗಳ ಏರ್‌ಪೋರ್ಟ್‌ ನೋಟ ಸಖತ್‌ ಸುದ್ದಿಯನ್ನು ಮಾಡುತ್ತದೆ. ಹೀಗಾಗಿ ಅವರು ಉಡುಪಿನ ಶೈಲಿ, ಬಣ್ಣಗಳ ಆಯ್ಕೆಯಲ್ಲಿ ಮುತುವರ್ಜಿ ವಹಿಸಿರುತ್ತಾರೆ ಈ ನಟ, ನಟಿಯರು. ಸೀಮಿತ ಮೇಕಪ್‌, ಡೆನಿಮ್‌, ಶ್ರಗ್‌, ಓವರ್‌ಕೋಟ್‌, ಸ್ವೆಟ್‌ಪ್ಯಾಂಟ್‌, ರಿಪ್ಡ್‌ ಜೀನ್ಸ್‌, ವ್ಯಾನಿಟಿ ಬ್ಯಾಗ್‌, ಶೂ...ಇವುಗಳೆಲ್ಲ ಏರ್‌ಪೋರ್ಟ್‌ ಲುಕ್‌ನಲ್ಲಿ ಪ್ರಾಧಾನ್ಯ ಪಡೆದಿವೆ. ಮೇಕಪ್‌ ಇಲ್ಲದೆಯೂ ಮುದ್ದಾಗಿ ಕಾಣುವ ಆಲಿಯಾ ವಿಮಾನ ಹತ್ತುವಾಗ ಹೆಚ್ಚಾಗಿ ಕಾಣಿಸಿಕೊಳ್ಳುವುದು ರಿಪ್ಡ್‌ ಜೀನ್ಸ್‌ನಲ್ಲಿ.

(ಆಲಿಯಾ)

ಬಾಲಿವುಡ್ ನಟಿ ಕಂಗನಾ ಟ್ರೆಂಡ್‌ ಫಾಲೋ ಮಾಡುವವರಲ್ಲ, ಟ್ರೆಂಡ್‌ ಸೆಟ್‌ ಮಾಡುವವರು. ಇವರ ಏರ್‌ಪೋರ್ಟ್‌ ಲುಕ್‌ನಲ್ಲಿ ಸೀರೆಗೆ ಪ್ರಾಧಾನ್ಯ. ಫ್ಲೋರಲ್‌ ಡ್ರೆಸ್, ಫ್ಲೋರೆಲ್ ವ್ಯಾನಿಟಿ ಬ್ಯಾಗ್‌, ಬ್ಲ್ಯಾಕ್‌ ಶೂ, ಸರಳವಾಗಿ ಕೇಶ ವಿನ್ಯಾಸ ಕಂಗನಾರ ಈ ಲುಕ್‌,  ಫ್ಯಾಷನ್‌ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ಸು ಗಳಿಸಿದೆ. ರೆಟ್ರೊ ಶೈಲಿಯಲ್ಲಿಯೂ ಇವರು ಆಗಾಗ ಕಾಣಿಸಿಕೊಳ್ಳುತ್ತಾರೆ.

(ಕರೀನಾ ಕಪೂರ್‌)

ಇತ್ತೀಚೆಗೆ ಕರೀನಾ ತೊಟ್ಟಿದ್ದ ಅನಿತಾ ಡೊಂಗ್ರೆ ವಿನ್ಯಾಸದ ಬಿಳಿ ಕಾಟನ್‌ ಕುರ್ತಾ, ಪಲಾಜೋ ಪ್ಯಾಂಟ್‌ ಫ್ಯಾಷನ್‌ ಪ್ರಿಯರ ಮೆಚ್ಚುಗೆ ಗಳಿಸಿತ್ತು. ದೀಪಿಕಾ ಪಡುಕೋಣೆ ಜಂಪ್‌ಸೂಟ್‌, ಜೀನ್ಸ್‌ನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಾರೆ. ಅನುಷ್ಕಾ, ಸೋನಂ, ಕೃತಿ, ಶಾಹಿದ್‌ ಕಪೂರ್‌, ಟೈಗರ್ ಶ್ರಾಫ್‌, ಮಲೈಕಾ ಆರೋರಾ ಹೀಗೆ ಸಾಕಷ್ಟು ಮಂದಿ ವಿಮಾನ ನಿಲ್ದಾಣದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡು ಮನ ಸೆಳೆಯುತ್ತಾರೆ. ಹೀರೊಗಳಲ್ಲಿ ಹೃತಿಕ್‌ ರೋಷನ್‌ ಹೆಚ್ಚು ಸ್ಟೈಲಿಷ್‌ ಎನಿಸಿಕೊಂಡಿದ್ದಾರೆ.

(ಟೈಗರ್ ಶ್ರಾಫ್‌)

ಈ ಸಿನಿಮಂದಿ ತಾವಷ್ಟೇ ಅಲ್ಲದೇ ತಮ್ಮ ಮಕ್ಕಳಿಗೂ ಪ್ರಯಾಣಕ್ಕೆ ಹೊಂದುವಂತೆ ತಯಾರು ಮಾಡುತ್ತಾರೆ. ಹೀಲ್ಡ್‌ ಚಪ್ಪಲಿಗಿಂತ ಶೂ ಧರಿಸುವುದು ಹೆಚ್ಚು. ಕಪ್ಪು, ಬಿಳುಪು ಉಡುಪಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಒಟ್ಟಿನಲ್ಲಿ ಆರಾಮದಾಯಕ ಮತ್ತು ಸರಳ ದಿರಿಸಿಗೆ ಏರ್‌ಪೋರ್ಟ್‌ ಲುಕ್‌ನಲ್ಲಿ ಆದ್ಯತೆ.

(ಅನುಷ್ಕಾ ಶರ್ಮಾ)

(ಹೃತಿಕ್‌ ರೋಷನ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry