ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಟ್ ಫಿಶಿಂಗ್ ವಿರುದ್ಧ ಪ್ರತಿಭಟನೆ

Last Updated 13 ಮಾರ್ಚ್ 2018, 9:47 IST
ಅಕ್ಷರ ಗಾತ್ರ

ಕಾರವಾರ/ ಗೋಕರ್ಣ: ಲೈಟ್ ಫಿಶಿಂಗ್ ಅನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕಾರವಾರದ ಟ್ರಾಲರ್ ಬೋಟ್‌ ಯೂನಿಯನ್ ಬೈತಖೋಲ್ ಬಂದರಿಗೆ ಜಿಲ್ಲಾ ಸಾಂಪ್ರದಾಯಿಕ ಹಾಗೂ ನಾಡದೋಣಿ ಮೀನುಗಾರರ ಒಕ್ಕೂಟದವರು ತದಡಿ ಬಂದರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಿದರು.

‘ಅಕ್ರಮವಾಗಿ ಲೈಟ್ ಫಿಶಿಂಗ್ ನಡೆಸುವುದರಿಂದ ಮೀನುಗಾರಿಕೆ ನಂಬಿ ಜೀವನ ನಡೆಸುತ್ತಿರುವ ಬಡ ನಾಡದೋಣಿ ಮೀನುಗಾರರಿಗೆ ನಷ್ಟ ಉಂಟಾಗುತ್ತಿದೆ. ಈ ಅವೈಜ್ಞಾನಿಕ ಮೀನುಗಾರಿಕೆಯನ್ನು ಸ್ಥಗಿತಗೊಳಿಸದಿದ್ದಲ್ಲಿ ಮಂಗಳವಾರದಿಂದಲೇ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಮೀನುಗಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಾರವಾರದಲ್ಲಿ ಮಾತನಾಡಿದ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಸಂತೋಷ ಹಡಪದ್, ‘ಈಗಾಗಲೇ ಭಟ್ಕಳ, ಕಾರವಾರದಲ್ಲಿ ಲೈಟ್ ಫಿಶಿಂಗ್ ಅನ್ನು ಸ್ಥಗಿತಗೊಳಿಸಿದ್ದೇವೆ. ಅನೇಕ ಕಡೆ ದಂಡ ವಿಧಿಸಿದ್ದೇವೆ. ಮಂಗಳವಾರದಿಂದ ಮತ್ತೆ ಯಾರಾದರೂ ಇದೇ ರೀತಿ ಮೀನುಗಾರಿಕೆ ನಡೆಸಲು ಮುಂದಾದಲ್ಲಿ ಬೋಟ್‌ನ ನೋಂದಣಿ ಪ್ರಮಾಣ ಪತ್ರ (ಆರ್.ಸಿ) ರದ್ದುಪಡಿಸುತ್ತೇವೆ’ ಎಂದು ಎಚ್ಚರಿಸಿದರು.

ಕಾರವಾರದ ಪ್ರಶಾಂತ ಹರಿಕಂತ್ರ, ವಿನಾಯಕ ಹರಿಕಂತ್ರ, ಜಿಲ್ಲಾ ನಾಡದೋಣಿ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ, ಸುಧಾಕರ ತಾರಿ, ಸೋಮನಾಥ ಮೊಗೇರ, ಉಮೇಶ ಖಾರ್ವಿ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT