‘ಮುಂದಿನ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ’

7

‘ಮುಂದಿನ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ’

Published:
Updated:

ಮುಂಬೈ : ‘ಮುಂದೆ ನಡೆಯಲಿರುವ ಎಲ್ಲ ಚುನಾವಣೆಗಳಲ್ಲಿ ಶಿವಸೇನಾ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ  ಈಗಾಗಲೇ ಸ್ಪಷ್ಟಪಡಿಸಿದ್ದಾರೆ’ ಎಂದು  ಮುಖಂಡ ಹಾಗೂ ಮಹಾರಾಷ್ಟ್ರ ಪರಿಸರ ಸಚಿವ ರಾಮ್‌ದಾಸ್‌ ಕದಂ ತಿಳಿಸಿದ್ದಾರೆ.

‘ಚುನಾವಣೆಯಲ್ಲಿ ಪಕ್ಷದ ಜೊತೆ ಬಿಜೆಪಿ ಕೈಜೋಡಿಸಲು ಮುಂದಾದರೆ, ಈ ವಿಷಯದಲ್ಲಿ ಉದ್ಧವ್‌ ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರಲಿದೆ’ ಎಂದಿದ್ದಾರೆ.

ಮುಂದಿನ ಚುನಾವಣೆಗಳಲ್ಲಿ ಬಿಜೆಪಿ– ಶಿವಸೇನಾ ಜೊತೆಗೂಡಿ ಸೆಣೆಸಲಿದೆ ಎಂದು ಮಹಾರಾಷ್ಟ್ರದ ಹಣಕಾಸು ಸಚಿವ ಸುಧೀರ್‌ ಮುನ್‌ಗಂಟಿವಾರ್‌ ಅವರು ಬುಧವಾರ ಹೇಳಿಕೆ ನೀಡಿದ್ದರು.

‘ಶಿವಸೇನಾವು ಏಕಾಂಗಿಯಾ‌ಗಿ ಸ್ಪರ್ಧಿಸುವ ಬಗ್ಗೆ ಉದ್ಧವ್‌ ನೀಡಿದ ಹೇಳಿಕೆಯನ್ನು ಮನ್‌ಗಂಟಿವಾರ್‌ ನೆನಪಿಸಿಕೊಳ್ಳಬೇಕು’ ಎಂದು ಕದಂ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry